ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರಾನ್ಸ್‌ | ಅನಾಮಧೇಯ ಕರೆಯೊಂದು ನೀಡಿದ ಮಾನವ ಕಳ್ಳಸಾಗಣೆ ಸುಳಿವು

Published 23 ಡಿಸೆಂಬರ್ 2023, 7:52 IST
Last Updated 23 ಡಿಸೆಂಬರ್ 2023, 8:33 IST
ಅಕ್ಷರ ಗಾತ್ರ

ಲಂಡನ್: ನಿಕಾರಗುವಾ 303 ಭಾರತೀಯ ಪ್ರಯಾಣಿಕರನ್ನು ಹೊತ್ತು ಹಾರಿದ ವಿಮಾನವೊಂದರಲ್ಲಿ ಮಾನವ ಕಳ್ಳಸಾಗಣೆ ನಡೆಯುತ್ತಿದೆ ಎಂಬ ಸುಳಿವು ನೀಡಿದ ಅನಾಮಧೇಯ ಕರೆಯೊಂದು ಈಗ ಜಾಗತಿಕ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿದೆ.

ದುಬೈನಿಂದ ಹಾರಿದ ರೊಮಾನಿಯಾದ ಲೆಜೆಂಡ್ ಏರ್‌ಲೈನ್ಸ್‌ಗೆ ಸೇರಿದ ಎ340 ವಿಮಾನದಲ್ಲಿ 303 ಜನ ಪ್ರಯಾಣಿಕರು ಇದ್ದರು. ಇವರನ್ನು ನಿಕಾರಗುವಾ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗ ಮಧ್ಯದಲ್ಲಿ ಇಂಧನ ಭರಿಸಲು ಪ್ಯಾರೀಸ್‌ನಿಂದ ಪ್ಯಾರಿಸ್‌ನಿಂದ 150 ಕಿ.ಮೀ. ದೂರದಲ್ಲಿರುವ ವಾಟ್ರಿ ಏರ್‌ಪೋರ್ಟ್‌ನಲ್ಲಿ ಈ ವಿಮಾನ ಇಳಿದಿದೆ. ಅದೇ ಸಂದರ್ಭದಲ್ಲಿ ಬಂದ ಕರೆಯೊಂದು ಫ್ರಾನ್ಸ್‌ನ ಸಂಘಟಿತ ಅಪರಾಧ ವಿರುದ್ಧದ ರಾಷ್ಟ್ರೀಯ ದಳವು ತನಿಖೆ ಕೈಗೊಳ್ಳುವಂತೆ ಮಾಡಿದೆ.

303 ಭಾರತ ಮೂಲದ ಪ್ರಯಾಣಿಕರನ್ನು ಯುಎಇ ಯಿಂದ ಹೊತ್ತು ಹಾರಿದ ವಿಮಾನವು, ಇಂಧನ ಭರಿಸಲು ಫ್ರಾನ್ಸ್‌ನ ವಾಟ್ರಿ ವಿಮಾನ ನಿಲ್ದಾಣದಲ್ಲಿ ಇಳಿಯಿತು. ಆದರೆ ಆರಂಭದಲ್ಲಿ ಪ್ರಯಾಣಿಕರನ್ನು ವಿಮಾನದಲ್ಲೇ ಕೂರಿಸಲಾಗಿತ್ತು. ನಂತರ ಅವರಿಗೆ ಹಾಸಿಗೆಗಳನ್ನು ನೀಡಿ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡದಲ್ಲೇ ಮಲಗಲು ಸೂಚಿಸಲಾಗಿತ್ತು. ಆದರೆ ಈ ಕುರಿತು ಬಂದ ಅನಾಮಧೇಯ ಕರೆಯೊಂದು ಮಾನವ ಕಳ್ಳ ಸಾಗಣೆಯ ಸುಳಿವು ನೀಡಿತು ಎಂದು ಪೊಲೀಸರು ಹೇಳಿದ್ದಾರೆ.

ಪ್ರಕರಣದಲ್ಲಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಪ್ರಯಾಣಿಕರ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿರುವುದಾಗಿ ‘ಲ ಮಾಂಡೆ’ ಪತ್ರಿಕೆ ವರದಿ ಮಾಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಭಾರತೀಯ ರಾಯಭಾರ ಕಚೇರಿ, ‘ದುಬೈನಿಂದ ನಿಕಾರಗುವಾ ಹೊರಟಿದ್ದ ವಿಮಾನವೊಂದು ತಾಂತ್ರಿಕ ಸಮಸ್ಯೆಯಿಂದ ಫ್ರಾನ್ಸ್ ನೆಲದ ವಿಮಾನ ನಿಲ್ದಾಣದಲ್ಲಿ ಇಳಿದಿದೆ. ಇದರಲ್ಲಿರುವ ಪ್ರಯಾಣಿಕರು ಭಾರತೀಯರೆಂಬ ಶಂಕೆ ಇರುವುದಾಗಿ ಫ್ರೆಂಚ್ ಅಧಿಕಾರಿಗಳು ತಿಳಿಸಿದ್ದಾರೆ.

ರಾಯಭಾರ ಕಚೇರಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ವಿಚಾರಣೆ ಆರಂಭಿಸಿದ್ದಾರೆ. ಪ್ರಯಾಣಿಕರ ಸುರಕ್ಷತೆಗೆ ಎಲ್ಲಾ ರೀತಿಯ ಕ್ರಮ ಕೈಗೊಂಡಿರುವುದಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT