ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಮ್ರಾನ್ ಖಾನ್ ಆಟ ಮುಗಿದಿದೆ: ಮರಿಯಂ ನವಾಜ್

Published 27 ಮೇ 2023, 16:12 IST
Last Updated 27 ಮೇ 2023, 16:12 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ‘ಪಾಕಿಸ್ತಾನ್ ತೆಹ್ರೀಕ್‌ –ಎ– ಇನ್ಸಾಫ್ (ಪಿಟಿಐ) ಪಕ್ಷದ ಹಿರಿಯ ನಾಯಕರ ನಿರ್ಗಮನದ ಬಳಿಕ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆಟ ಮುಗಿದಿದೆ’ ಎಂದು ಪಾಕಿಸ್ತಾನ ಮುಸ್ಲಿಂ ಲೀಗ್ ನವಾಜ್ (ಪಿಎಂಎಲ್‌–ಎನ್) ಪಕ್ಷದ ಹಿರಿಯ ಉಪಾಧ್ಯಕ್ಷೆ ಮರಿಯಂ ಖಾನ್ ಹೇಳಿದ್ದಾರೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದ ಸಮಾವೇಶವೊಂದರಲ್ಲಿ ಈ ಹೇಳಿಕೆ ನೀಡಿರುವ ಮರಿಯಂ, ತಮ್ಮ ಭಾಷಣದಲ್ಲಿ ಮೇ 9ರಂದು ಪಿಟಿಐ ಮುಖ್ಯಸ್ಥ ಇಮ್ರಾನ್ ಖಾನ್ ಅವರನ್ನು ಬಂಧಿಸಿದ ಹಾಗೂ ಅಂದು ದೇಶದಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳು ನಡೆದ ಬಗ್ಗೆಯೂ ಪ್ರಸ್ತಾಪಿಸಿದರು. 

ಮೇ 9ರಂದು ಪಿಟಿಐನ ಹಿರಿಯ ನಾಯಕರು ಸೇರಿದಂತೆ 70 ವಕೀಲರು ಹಾಗೂ ಇತರ ಮುಖಂಡರು ಪಕ್ಷವನ್ನು ತೊರೆದಿದ್ದಾರೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಅಸದ್ ಉಮರ್, ಮಾಹಿತಿ ಖಾತೆಯ ಮಾಜಿ ಸಚಿವ ಫವಾದ್ ಚೌಧರಿ ಮತ್ತು ಮಾನವ ಹಕ್ಕುಗಳ ಮಾಜಿ ಸಚಿವ ಶಿರೀನ್ ಮಜಾರಿ ಸೇರಿದಂತೆ ಇತರ ಪ್ರಮುಖರು ಪಿಟಿಐಗೆ ರಾಜೀನಾಮೆ ನೀಡಿದ್ದಾರೆ.

ಪಿಟಿಐ ನಾಯಕರ ಸಾಮೂಹಿಕ ನಿರ್ಗಮನದ ಬಗ್ಗೆ ವ್ಯಂಗ್ಯವಾಡಿರುವ  ಮರಿಯಂ ಅವರು, ‘ಪಕ್ಷವನ್ನು ತೊರೆಯುವವರ ಬಗ್ಗೆ ಕೆಲವು ಪ್ರಶ್ನೆಗಳಿವೆ. ಪಕ್ಷದ ನಾಯಕರೇ ಅನೈತಿಕ ಕೆಲಸದಲ್ಲಿ ತೊಡಗಿಕೊಂಡಿದ್ದರೆ ಜನರು ಹೇಗೆ ಅವರ ಜತೆಗೆ ನಿಲ್ಲುವರು. ಮೇ 9ರ ಹಿಂಸಾತ್ಮಕ ಘಟನೆಗಳಿಗೆ ಪ್ರಚೋದನೆ ನೀಡಿದ್ದು ಇಮ್ರಾನ್ ಖಾನ್. ಇದರ ಹಿಂದಿರುವ ಸಂಚುಕೋರ ಅವರೇ ಎಂದು ಅವರ ಬೆಂಬಲಿಗರೇ ಹೇಳುತ್ತಿದ್ದಾರೆ’ ಎಂದೂ ಆರೋಪಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT