ಲಂಡನ್: ಮಹಾತ್ಮ ಗಾಂಧಿ ಅವರ ಅಪರೂಪದ ತೈಲವರ್ಣಚಿತ್ರವು ಬಾನ್ಹಮ್ಸ್ ಹರಾಜಿನಲ್ಲಿ ಅಂದಾಜಿಗಿಂತ ಮೂರು ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗಿದೆ.

₹1.75 ಕೋಟಿಗೆ (152,800 ಪೌಂಡ್) ಈ ತೈಲವರ್ಣಚಿತ್ರವು ಬಿಕರಿಯಾಗಿದೆ.

ಹಿಂದಿನ ಯಾವುದೇ ಹರಾಜಿನಲ್ಲಿ ಮಾರಾಟಕ್ಕಿಡದ ಈ ತೈಲವರ್ಣಚಿತ್ರಕ್ಕೆ ₹57.55 ಲಕ್ಷದಿಂದ (50000 ಪೌಂಡ್) ₹80.59 ಲಕ್ಷ (70000 ಪೌಂಡ್) ಬೆಲೆ ನಿಗದಿಪಡಿಸಿ ಆನ್ಲೈನ್ ಹರಾಜಿನಲ್ಲಿಡಲಾಗಿತ್ತು. ಮಂಗಳವಾರ ಮುಕ್ತಾಯಗೊಂಡ ಹರಾಜಿನಲ್ಲಿ ಅಗ್ರಸ್ಥಾನದೊಂದಿಗೆ ₹1.75 ಕೋಟಿಗೆ ಮಾರಾಟವಾಗಿದೆ.

ಎರಡನೇ ದುಂಡು ಮೇಜಿನ ಸಮ್ಮೇಳನದಲ್ಲಿ ಪಾಲ್ಗೊಳಲು 1931ರಲ್ಲಿ ಲಂಡನ್ಗೆ ಭೇಟಿ ನೀಡಿದ್ದಾಗ ಕಲಾವಿದರಾದ ಕ್ಲೇರ್ ಲೈಟನ್ ಅವರನ್ನು ಗಾಂಧಿ ಅವರಿಗೆ ಪರಿಚಯಿಸಲಾಗಿತ್ತು. ಆಗ ರಚನೆಗೊಂಡ ಕಲಾಕೃತಿಯಿದು.

ಮಹಾತ್ಮ ಗಾಂಧಿ ಅವರ ಏಕೈಕ ತೈಲವರ್ಣಚಿತ್ರವಿದು ಎಂದು ಭಾವಿಸಲಾಗಿದೆ ಎಂದು ಬಾನ್ಹಮ್ಸ್ ಮಾರಾಟ ವಿಭಾಗದ ಮುಖ್ಯಸ್ಥರಾದ ರಿಯಾನಾನ್ ಡೆಮೆರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.