ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಮಾಸ್‌ ಬೆಂಬಲಿಗರ ಆಸ್ತಿಗಳ ಮೇಲೆ ದಾಳಿ ನಡೆಸಿದ ಜರ್ಮನ್‌ ಪೊಲೀಸರು

Published 23 ನವೆಂಬರ್ 2023, 10:01 IST
Last Updated 23 ನವೆಂಬರ್ 2023, 10:01 IST
ಅಕ್ಷರ ಗಾತ್ರ

ಬರ್ಲಿನ್‌: ಹಮಾಸ್‌ ಬೆಂಬಲಿಗರಿಗೆ ಸೇರಿದ ಆಸ್ತಿಗಳ ಮೇಲೆ ದಾಳಿ ನಡೆಸಿರುವ ಜರ್ಮನ್‌ ಪೊಲೀಸರು, ತಪಾಸಣೆ ಕೈಗೊಂಡಿದ್ದಾರೆ. ಜತೆಗೆ ಹಮಾಸ್ ಬೆಂಬಲಿಗರು ಯಾವುದೇ ಚಟುವಟಿಕೆ ನಡೆಸದಂತೆ ಜರ್ಮನ್ ಸರ್ಕಾರ ನಿರ್ಬಂಧ ಹೇರಿದೆ.

ಅ. 7ರಂದು ಇಸ್ರೇಲ್ ಮೇಲೆ ಹಮಾಸ್ ಬಂಡುಕೋರರು ದಾಳಿ ನಡೆಸಿದ್ದನ್ನು ಸಂಭ್ರಮಿಸಿದ ಬರ್ಲಿನ್‌ ಹಮಾಸ್ ಬೆಂಬಲಿಗರ ಸಂಘಟನೆ ಮೇಲೆ ನ. 2ರಂದು ಜರ್ಮನ್ ಸರ್ಕಾರ ನಿಷೇಧ ಹೇರಿತ್ತು. ಜರ್ಮನಿಯ ಆಂತರಿಕ ಗುಪ್ತಚರ ಮಾಹಿತಿ ಅನ್ವಯ ದೇಶದಲ್ಲಿ 450 ಹಮಾಸ್ ಬೆಂಬಲಿಗರು ಇದ್ದಾರೆ. ಇವರು ಹಮಾಸ್ ಕುರಿತು ಅನುಕಂಪ ಮೂಡಿಸುವ ಹಾಗೂ ಅವರ ಪರ ಪ್ರಚಾರ ಕೈಗೊಳ್ಳುವ ಕಾರ್ಯ ಮಾಡುತ್ತಿದ್ದಾರೆ. ಜತೆಗೆ ಹಮಾಸ್ ಸಂಘಟನೆಯ ಬಲವರ್ಧನೆಗೆ ಆರ್ಥಿಕ ನೆರವನ್ನೂ ನೀಡುತ್ತಿದ್ದಾರೆ ಎಂದು ಮಾಹಿತಿಯಲ್ಲಿ ಹೇಳಲಾಗಿದೆ.

‘ಇಸ್ಲಾಮ್‌ನ ತೀವ್ರವಾದಿಗಳ ವಿರುದ್ಧ ನಾವು ನಮ್ಮ ಕಾರ್ಯಾಚರಣೆ ಮುಂದುವರಿಸುತ್ತಿದ್ದೇವೆ. ಜರ್ಮನಿಯಲ್ಲಿ ಹಮಾಸ್ ಕಾರ್ಯಚಟುವಟಿಕೆಗಳ ಮೇಲೆ ನಿಷೇಧ ಹೇರಲಾಗಿದೆ. ಇಸ್ರೇಲ್ ಮೇಲೆ ಹಮಾಸ್ ನಡೆಸಿದ ಪೈಶಾಚಿಕ ಕೃತ್ಯವನ್ನು ವೈಭವೀಕರಿಸುವ ಯಾವುದೇ ಚಟುವಟಿಕೆಗಳನ್ನು ಜರ್ಮನಿ ಸಹಿಸದು ಎಂಬ ಸ್ಪಷ್ಟ ಸಂದೇಶ ರವಾನಿಸಲಾಗುತ್ತಿದೆ’ ಎಂದು ಜರ್ಮನಿಯ ಆಂತರಿಕ ವ್ಯವಹಾರಗಳ ಮಂತ್ರಿ ನ್ಯಾನ್ಸಿ ಫೀಸೆರ್ ತಿಳಿಸಿದ್ದಾರೆ.

‘ಆನ್‌ಲೈನ್ ವೇದಿಕೆಯಲ್ಲಿ ಯಹೂದಿಗಳ ವಿರುದ್ಧ ಬೆದರಿಕೆ, ಇರಾನ್‌ ನಾಯಕತ್ವದ ಸಿದ್ಧಾಂತಗಳ ಬೆಂಬಲ, ಹಿಜ್ಬುಲ್‌ ಕಾರ್ಯಾಚರಣೆಗೆ ಬೆಂಬಲದಂತ ಚಟುವಟಿಕೆಗಳನ್ನು ಇವರು ನಡೆಸಿದ್ದಾರೆ. ಮುಸ್ಲಿಮರ ಮೇಲೆ ನಾವು ನಿಗಾ ಇರಿಸಿದ್ದೇವೆ. ಇಸ್ಲಾಮ್‌ ಧರ್ಮ ಅನುಯಾಯಿಗಳು ಹಾಗೂ ಯಹೂದಿ ವಿರೋಧಿಗಳು ಜರ್ಮನಿಯಲ್ಲಿ ಹೇಗೆ ಬೇಕಾದರೆ ಹಾಗೆ ಇರುತ್ತೇವೆ ಎಂಬ ಭಾವನೆಯನ್ನು ಕೈಬಿಡಬೇಕು. ಹಮಾಸ್ ಬೆಂಬಲಿಗರು ಜರ್ಮನಿಯಲ್ಲಿ ರಾಜಕೀಯ ಹಾಗೂ ಸಾಮಾಜಿಕ ಸಂವಾದಗಳನ್ನು ನಡೆಸಿ ಜನರ ಮೇಲೆ ಪ್ರಭಾವ ಬೀರುವ ಕೆಲಸ ಮಾಡುತ್ತಿದ್ದರು’ ಎಂದು ಆರೋಪಿಸಿದ್ದಾರೆ.

ದಾಳಿಯ ಬಹುಪಾಲು ಬರ್ಲಿನ್‌ನಲ್ಲೇ ನಡೆದಿದ್ದು, ಒಟ್ಟು 15 ಸ್ಥಳಗಳನ್ನು ಪೊಲೀಸರು ಶೋಧಿಸಿದ್ದಾರೆ. ಇದರೊಂದಿಗೆ ದೇಶದ ಇತರ ರಾಜ್ಯಗಳಲ್ಲಿರುವ ಹಮಾಸ್‌ ಬೆಂಬಲಿಗರಿಗೆ ಸೇರಿದ ಆಸ್ತಿಗಳ ಮೇಲೂ ಪೊಲೀಸರು ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT