ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲಂಬಿಯಾ ಪತ್ರಕರ್ತೆಗೆ ಗೋಲ್ಡನ್‌ ಪೆನ್ ಆಫ್ ಫ್ರೀಡಂ ಪ್ರಶಸ್ತಿ

Last Updated 18 ಸೆಪ್ಟೆಂಬರ್ 2020, 15:29 IST
ಅಕ್ಷರ ಗಾತ್ರ

ಜರಗೊಜಾ, ಸ್ಪೇನ್: ಪತ್ರಿಕಾ ಪ್ರಕಾಶಕರ ಜಾಗತಿಕ ಸಂಘಟನೆ (ವ್ಯಾನ್–ಇಫ್ರಾ) ನೀಡುವವಾರ್ಷಿಕಪತ್ರಿಕಾ ಸ್ವಾತಂತ್ರ್ಯ ಪ್ರಶಸ್ತಿ ‘ಗೋಲ್ಡನ್‌ ಪೆನ್ ಆಫ್ ಫ್ರೀಡಂ’ ಈ ಬಾರಿ ಕೊಲಂಬಿಯಾದ ಪತ್ರಕರ್ತೆಜಿನೆತ್ ಬೆಡೋಯಾ ಲಿಮಾ ಅವರಿಗೆ ಸಂದಿದೆ.ಪತ್ರಿಕಾ ಸ್ವಾತಂತ್ರ್ಯ ಪ್ರತಿಪಾದನೆ ಹಾಗೂ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಪತ್ರಕರ್ತರನ್ನು ಪ್ರತೀವರ್ಷ ಪ್ರಶಸ್ತಿಗೆ ವ್ಯಾನ್–ಇಫ್ರಾ ಆಯ್ಕೆ ಮಾಡುತ್ತದೆ.

ಜಿನೆತ್‌ ಅವರು ಪತ್ರಿಕೋದ್ಯಮಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಮಹಿಳೆಯರ ಹಕ್ಕುಗಳ ರಕ್ಷಣೆ ಹಾಗೂ ಜಾಗೃತಿಗಾಗಿ ಅವರು ಮಾಡಿದ ಅವಿರತ ಕೆಲಸ, ಸಮಸ್ಯೆಗಳನ್ನು ಎದುರಿಸುವಲ್ಲಿ ಅವರು ತೋರುವ ಧೈರ್ಯವನ್ನು ಪ್ರಶಸ್ತಿ ಆಯ್ಕೆ ಸಮಿತಿ ಪರಿಗಣಿಸಿದೆ. ಅವರ ಈ ಗುಣಗಳು ಪ್ರಪಂಚದಾದ್ಯಂತ ಇರುವ ಪತ್ರಿಕೋದ್ಯಮದ ಗೆಳೆಯ ಗೆಳತಿಯರಿಗೆ ಸ್ಫೂರ್ತಿದಾಯಕ ಎಂದು ಸಮಿತಿ ತಿಳಿಸಿದೆ.

ಈ ಪ್ರಶಸ್ತಿಯು ಪತ್ರಕರ್ತರಿಗೆ ದೊರೆಯಬಹುದಾದ ಅತಿದೊಡ್ಡ ಪ್ರೋತ್ಸಾಹ ಮತ್ತು ಬೆಂಬಲ ಎಂದು ಜಿನೆತ್‌ ಹೇಳಿದ್ದಾರೆ. ಕೊಲಂಬಿಯಾದ ಸಶಸ್ತ್ರ ಸಂಘರ್ಷ, ಮಾದಕವಸ್ತು ಸಾಗಣೆ ಹಾಗೂ ಲಿಂಗ ಸಮಾನತೆ ವಿಚಾರವಾಗಿ ಅವರು ಕಳೆದ ಎರಡು ದಶಕಗಳಿಂದ ವರದಿ ಮಾಡುತ್ತಿದ್ದಾರೆ. ಪ್ರಸ್ತುತ ಅವರು ‘ಎಲ್ ಟೈಂಪೂ’ ಪತ್ರಿಕೆಯ ಡೆಪ್ಯುಟಿ ಎಡಿಟರ್ ಆಗಿದ್ದಾರೆ. ಭಾಷಣಕಾರ್ತಿ ಆಗಿಯೂಗುರುತಿಸಿಕೊಂಡಿದ್ದು, ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT