ಟೋಕಿಯೊ: ಜಪಾನ್‌ನ ನೋಟೋ ಪ್ರದೇಶದಲ್ಲಿ ಶನಿವಾರ ಧಾರಾಕಾರ ಮಳೆಯಾಗಿದೆ. ಮಳೆಗೆ ಕೆಲವೆಡೆ ಭೂಕುಸಿತ ಸಂಭವಿಸಿದ್ದು, ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಒಬ್ಬ ವ್ಯಕ್ತಿ ಕಾಣೆಯಾಗಿದ್ದಾನೆ ಎಂದು ಜಪಾನ್‌ನ ಹವಾಮಾನ ಸಂಸ್ಥೆ ತಿಳಿಸಿದೆ.
ಇಶಿಕಾವಾ ಪ್ರಾಂತ್ಯದ ಹಲವು ನಗರಗಳಲ್ಲಿ ಅಧಿಕ ಪ್ರಮಾಣದ ಮಳೆಯಾಗಿದ್ದು, ಭಾನುವಾರ ಕೂಡ 20 ಸೆ.ಮೀ.ನಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಸಂಸ್ಥೆಯು ತಿಳಿಸಿದೆ.
ಇಶಿಕಾವಾದಲ್ಲಿ ಶನಿವಾರ ಕನಿಷ್ಠ 12 ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಸ್ಥಳೀಯರು ಎಚ್ಚರ ವಹಿಸುವಂತೆ ಭೂ ಮತ್ತು ಮೂಲಸೌಕರ್ಯ ಸಚಿವಾಲಯ ತಿಳಿಸಿದೆ.