ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೌರ್ಜನ್ಯ: ಕೋರ್ಟ್ ಆದೇಶ ವಿರುದ್ಧ ಮೇಲ್ಮನವಿ –ಹಿಂದೂಜಾ ಕುಟುಂಬ

Published 22 ಜೂನ್ 2024, 15:32 IST
Last Updated 22 ಜೂನ್ 2024, 15:32 IST
ಅಕ್ಷರ ಗಾತ್ರ

ಲಂಡನ್‌ (ಪಿಟಿಐ): ಮನೆಕೆಲಸದವರ ಮೇಲೆ ಕೌಟುಂಬಿಕ ದೌರ್ಜನ್ಯ ಆರೋಪ ಕುರಿತ ಪ್ರಕರಣದಲ್ಲಿ ಕುಟುಂಬದ ಕೆಲವರು ತಪ್ಪಿತಸ್ಥರು ಎಂಬ ಸ್ವಿಸ್‌ ಕೋರ್ಟ್ ಆದೇಶ ಪ್ರಶ್ನಿಸಿ, ಉನ್ನತ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಬ್ರಿಟನ್‌ನ ಅತಿಶ್ರೀಮಂತ ಹಿಂದೂಜಾ ಕುಟುಂಬವು ತಿಳಿಸಿದೆ.

ಭಾರತ ಮೂಲದ ಮನೆಕೆಲಸದವರ ಮೇಲೆ ದೌರ್ಜನ್ಯ ಎಸಗಿದ ಆರೋಪ ಕುಟುಂಬದ ಕೆಲವರ ಮೇಲಿದೆ. ಕುಟುಂಬ ಪರವಾಗಿ ನೀಡಲಾದ ಹೇಳಿಕೆಯಲ್ಲಿ, ಕುಟುಂಬದ ನಾಲ್ವರರಿಗೆ ನಾಲ್ಕರಿಂದ ನಾಲ್ಕೂವರೆ ವರ್ಷ ಸಜೆ ವಿಧಿಸಿದ ಬಳಿಕ ಇತರೆ ಯಾವುದೇ ಸದಸ್ಯರನ್ನು ವಶಕ್ಕೆ ಪಡೆದಿರಲಿಲ್ಲ ಎಂದು ತಿಳಿಸಿದ್ದಾರೆ.

ಕುಟುಂಬದ ವಕೀಲರು, ಮಾನವ ಸಾಗಣೆ ಆರೋಪದಿಂದ ಕಕ್ಷಿದಾರರಾದ ಪ್ರಕಾಶ್, ಕಮಲ್‌ ಹಿಂದೂಜಾ, ಅವರ ಪುತ್ರ ಅಜಯ್‌, ಇವರ ಪತ್ನಿ ನಮ್ರತಾ ಅವರನ್ನು ದೋಷಮುಕ್ತಗೊಳಿಸಲಾಗಿದೆ. ಕೋರ್ಟ್‌ನ ಇತರೆ ಆದೇಶ ಕುರಿತು ನಿರಾಶೆಯಾಗಿದೆ. ಅದರ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT