ಹಾಂಗ್‌ಕಾಂಗ್: ಅನುಮತಿ ಪಡೆಯದೇ ನಡೆದ ಪ್ರತಿಭಟನೆಯಲ್ಲಿ ಭಾಗಿಯಾದ ಆರೋಪದಡಿ, ಪ್ರಜಾಪ್ರಭುತ್ವ ಪರ ಹೋರಾಟ ನಡೆಸುವ ಎಂಟು ಜನ ಕಾರ್ಯಕರ್ತರನ್ನು ಹಾಂಗ್‌ಕಾಂಗ್ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಅನಧಿಕೃತವಾಗಿ ಪ್ರತಿಭಟನೆ ಆಯೋಜನೆ ಮತ್ತು ಪ್ರತಿಭಟನೆಯಲ್ಲಿ ಭಾಗಿಯಾದ 24ರಿಂದ 64 ವಯಸ್ಸಿನ 8 ಮಂದಿಯನ್ನು ಬಂಧಿಸಲಾಗಿದೆ ಎಂದೂ ಪೊಲೀಸರು ತಿಳಿಸಿದರು.

ರಾಷ್ಟ್ರೀಯ ಭದ್ರತಾ ಕಾನೂನು ಅನ್ನು ವಿರೋಧಿಸಿಜುಲೈ 1 ರಂದು ನಡೆದಿದ್ದ ಪ್ರತಿಭಟನೆಗೆ ಸಂಬಂಧಿಸಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಹಲವು ಮಾಜಿ ಸಂಸದರನ್ನು ಸಹ ಬಂಧಿಸಲಾಗಿದೆ.

ಮಾಜಿ ಸಂಸದರಾದ ವು ಚಿ-ವಾಯ್, ಎಡ್ಡಿ ಚು ಮತ್ತು ಲೆಯುಂಗ್ ಕ್ವಾಕ್ ಹಂಗ್ ಅವರನ್ನು ಅವರ ನಿವಾಸದಲ್ಲಿ ಬಂಧಿಸಲಾಗಿದೆ. ತಮ್ಮನ್ನು ಬಂಧಿಸಿರುವ ಕುರಿತು ಈ ಮೂವರು ಹೋರಾಟಗಾರರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಜುಲೈ 1 ರ ಪ್ರತಿಭಟನೆ ವೇಳೆ 370 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿತ್ತು. ಇದರಲ್ಲಿ 10 ಮಂದಿಯನ್ನು ರಾಷ್ಟ್ರೀಯ ಭದ್ರತಾ ಕಾನೂನಿನಡಿ ಬಂಧಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.