ಹಾಂಗ್ಕಾಂಗ್ (ರಾಯಿಟರ್ಸ್/ಪಿಟಿಐ): ಚೀನಾದ ಅರೆಸ್ವಾಯತ್ತ ಪ್ರದೇಶವಾದ ಹಾಂಗ್ಕಾಂಗ್ ನಗರದ ಮೇಲೆ, ಚೀನಾಗೆ ಹೆಚ್ಚಿನ ಹಿಡಿತ ಸಾಧಿಸಲು ಅನುವು ಮಾಡಿಕೊಡುವ ನೂತನ ಭದ್ರತಾ ಕಾನೂನು ನಗರವಾಸಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಹಲವರು ಹಾಂಗ್ಕಾಂಗ್ ತೊರೆಯಲು ಮುಂದಾಗಿದ್ದಾರೆ. ಇಲ್ಲಿನ ಜನರಿಗೆ ಆಶ್ರಯ ಮತ್ತು ಪೌರತ್ವ ನೀಡಲು ಹಲವು ದೇಶಗಳು ಮುಂದೆ ಬಂದಿವೆ. ಇದು ಚೀನಾದ ಆಕ್ರೋಶಕ್ಕೆ ಕಾರಣವಾಗಿದೆ.

ಹಾಂಗ್ಕಾಂಗ್ನ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯಿಂದಾಗಿಯೇ ಈ ನಗರ ವ್ಯಾಪಾರ ಕೇಂದ್ರವಾಗಿ ರೂಪುಗೊಳ್ಳಲು ಸಾಧ್ಯವಾಗಿದೆ ಎಂಬ ವಾದ ಇದೆ. ಆದರೆ, ಚೀನಾದ ನೂತನ ಕಾನೂನು, ಈ ವ್ಯವಸ್ಥೆಯನ್ನು ಬದಿಗೆ ಸರಿಸುತ್ತದೆ ಮತ್ತು ಚೀನಾದ ಪೊಲೀಸರು ಹಾಂಗ್ಕಾಂಗ್ನಲ್ಲಿಮುಕ್ತವಾಗಿ ಅಧಿಕಾರ ಚಲಾಯಿಸಲು ಅವಕಾಶ ಮಾಡಿಕೊಡುತ್ತದೆ. ಇದು ಇಲ್ಲಿನ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ.ಪ್ರಜಾಪ್ರಭುತ್ವದ ಪರವಾಗಿ ಹಾಂಗ್ಕಾಂಗ್ನಲ್ಲಿ ಒಂದು ವರ್ಷದಿಂದ ನಡೆಯುತ್ತಿರುವ ಭಾರಿ ಪ್ರತಿಭಟನೆಯನ್ನು ಹತ್ತಿಕ್ಕುವ ಉದ್ದೇಶದಿಂದಲೇ ಚೀನಾ ಈ ಕಾನೂನು ಜಾರಿಗೆ ತಂದಿದೆ ಎಂದು ವಿಶ್ಲೇಷಿಸಲಾಗಿದೆ.

‘ಈ ನೂತನ ಕಾನೂನನ್ನು ಸರ್ವಾಧಿಕಾರದಂತೆ ಹೇರಲಾಗುತ್ತಿದೆ. ಇದು ಜನರ ಮೂಲಭೂತ ಹಕ್ಕುಗಳು, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪ್ರತಿಭಟಿಸುವ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಿದೆ. ಈ ಕಾನೂನಿನ ವಿರುದ್ಧ ಪ್ರತಿಭಟಿಸಿದ ನಾಲ್ವರನ್ನು ಈಗಾಗಲೇ ಬಂಧಿಸಲಾಗಿದೆ’ ಎಂದು ಹಾಂಗ್ಕಾಂಗ್ ವಕೀಲರ ಸಂಘವು ಕಳವಳ ವ್ಯಕ್ತಪಡಿಸಿದೆ.

‘ಹಾಂಗ್ಕಾಂಗ್ನಲ್ಲಿ ಬಂಧಿಸಲಾದವರನ್ನು ಚೀನಾಗೆ ಕರೆದೊಯ್ಯಲು ಅಲ್ಲಿನ ಪೊಲೀಸರಿಗೆ ಈ ಕಾನೂನು ಅವಕಾಶ ಮಾಡಿಕೊಡುತ್ತದೆ. ಇಲ್ಲಿನ ನ್ಯಾಯಾಂಗವೂ ಇದನ್ನು ತಡೆಯಲು ಸಾಧ್ಯವಿಲ್ಲ. ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯಲ್ಲಿ ಇದ್ದವರು, ಇನ್ನು ಮುಂದೆ ಚೀನಾದ ಕಮ್ಯುನಿಸ್ಟ್ ಸರ್ಕಾರದ ಅಧೀನದಲ್ಲಿ ಇರುವ ನ್ಯಾಯಾಂಗ ವ್ಯವಸ್ಥೆಯಲ್ಲಿ ವಿಚಾರಣೆ ಎದುರಿಸಬೇಕಾಗುತ್ತದೆ. ಇಲ್ಲಿನ ನಿವಾಸಿಗಳ ಆತಂಕಕ್ಕೆ ಇದೇ ಕಾರಣ’ ಎಂದು ವಕೀಲರ ಸಂಘವು ಹೇಳಿದೆ.

ಕಾನೂನು ಜಾರಿಯಾದ ಬೆನ್ನಲ್ಲೇ ಹಾಂಗ್ಕಾಂಗ್ ನಿವಾಸಿಗಳಲ್ಲಿ ಹಲವರು ನಗರವನ್ನು ತೊರೆಯಲು ಮುಂದಾಗಿದ್ದಾರೆ. ಹಾಂಗ್ಕಾಂಗ್ ಉದ್ಯಮಿಗಳು ಬೇರೆ ದೇಶಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಹಾಂಗ್ಕಾಂಗ್ ತೊರೆಯಲು ಬಯಸುವವರಿಗೆ ತಮ್ಮಲ್ಲಿ ಆಶ್ರಯ ನೀಡುತ್ತೇವೆ ಮತ್ತು ಪೌರತ್ವ ನೀಡುತ್ತೇವೆ ಎಂದು ಬ್ರಿಟನ್, ಆಸ್ಟ್ರೇಲಿಯ ಹಾಗೂ ತೈವಾನ್ ಹೇಳಿವೆ. ಇದಕ್ಕೆ ಚೀನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಆಶ್ರಯ ನೀಡಲು ಬ್ರಿಟನ್ ಸಿದ್ಧ
ಹಾಂಗ್ಕಾಂಗ್ ಬ್ರಿಟನ್ನ ವಸಾಹತುವಾಗಿತ್ತು. ಹಲವು ಒಪ್ಪಂದಗಳ ನಂತರ ಆ ನಗರವನ್ನು ಚೀನಾಕ್ಕೆ ಬ್ರಿಟನ್ ಹಸ್ತಾಂತರಿಸಿತ್ತು. ‘ಹಾಂಗ್ಕಾಂಗ್ ನಿವಾಸಿಗಳನ್ನು ಬ್ರಿಟನ್ನ ಸಾಗರೋತ್ತರ ಪ್ರಜೆಗಳು ಎಂದು ಪರಿಗಣಿಸುತ್ತೇವೆ’ ಎಂದು ಬ್ರಿಟನ್ ಹೇಳಿದೆ.

ಕಚೇರಿ ಆರಂಭಿಸಿದ ತೈವಾನ್: ಹಾಂಗ್ಕಾಂಗ್ಗೆ ಸಮೀಪವಿರುವ ತೈವಾನ್ ಸಹ, ಹಾಂಗ್ಕಾಂಗ್ ನಿವಾಸಿಗಳಿಗೆ ಆಶ್ರಯ ನೀಡುವುದಾಗಿ ಹೇಳಿದೆ. ಇದಕ್ಕಾಗಿ ತೈವಾನ್ ಸರ್ಕಾರವು ಬುಧವಾರವೇ ಹಾಂಗ್ಕಾಂಗ್ನಲ್ಲಿ ವಿಶೇಷ ಕಚೇರಿಯನ್ನು ತೆರೆದಿದೆ. ಕಚೇರಿ ಆರಂಭವಾದ ಮೊದಲ ದಿನವೇ 180 ಮಂದಿ, ಆಶ್ರಯ ಕೋರಿ ಮನವಿ ಸಲ್ಲಿಸಿದ್ದಾರೆ.

ಅಮೆರಿಕ ಕ್ರಮ: ಚೀನಾದ ಕಂಪನಿಗಳ ಜತೆ ವ್ಯವಹರಿಸುವ ಬ್ಯಾಂಕ್ಗಳಿಗೆ ದಂಡ ವಿಧಿಸುವ ನೂತನ ಕಾನೂನನ್ನು ಅಮೆರಿಕ ಜಾರಿ ಮಾಡಿದೆ.

ನಿಲುವು ಬದಲಿಸಿದ ಭಾರತ
ಚೀನಾದ ಆಂತರಿಕ ವಿಚಾರದಲ್ಲಿ ತಟಸ್ಥವಾಗಿರುವ ನಿಲುವನ್ನು ಭಾರತ ಕೈಬಿಟ್ಟಿದೆ. ಹಾಂಗ್ಕಾಂಗ್ನಲ್ಲಿನ ಬೆಳವಣಿಗೆ ಬಗ್ಗೆ ವಿಶ್ವಸಂಸ್ಥೆಯಲ್ಲಿ ಭಾರತವು ಕಳವಳ ದಾಖಲಿಸಿದೆ.

‘ಹಾಂಗ್ಕಾಂಗ್ನಲ್ಲಿ ಭಾರತೀಯರು ದೊಡ್ಡ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಅಲ್ಲಿನ ಬೆಳವಣಿಗೆಗಳನ್ನು ಭಾರತವು ಸೂಕ್ಷ್ಮವಾಗಿ ಗಮನಿಸುತ್ತಿದೆ. ಅಲ್ಲಿನ ಪರಿಸ್ಥಿತಿ ಬಗ್ಗೆ ಕಳವಳದ ಹೇಳಿಕೆಗಳನ್ನೂ ಭಾರತ ಗಮನಿಸಿದೆ. ಸಂಬಂಧಿತರು ಇದನ್ನು ಗಂಭೀರವಾಗಿ ಪರಿಗಣಿಸಿ, ಈ ಬಿಕ್ಕಟ್ಟನ್ನು ಪರಿಹರಿಸುತ್ತಾರೆ ಎಂಬ ಭರವಸೆ ಇದೆ’ ಎಂದು ಭಾರತವು ವಿಶ್ವಸಂಸ್ಥೆಯಲ್ಲಿ ಹೇಳಿದೆ.

ಆಸ್ಟ್ರೇಲಿಯಾಆಸಕ್ತಿ
‘ಹಾಂಗ್ಕಾಂಗ್ ನಿವಾಸಿಗಳಿಗೆ ಬ್ರಿಟನ್ ಆಶ್ರಯ ಘೋಷಿಸಿರುವಂತೆ ನಾವೂ ಘೋಷಿಸುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬಂದರೆ, ಅದನ್ನು ನಾನು ಖಂಡಿತ ಘೋಷಿಸುತ್ತೇನೆ. ಆದರೆ, ಈ ವಿಚಾರದಲ್ಲಿ ಕೆಲಸ ಆರಂಭಿಸಿದ್ದೇವೆ’ ಎಂದು ಆಸ್ಟ್ರೇಲಿಯಾಪ್ರಧಾನಿ ಸ್ಕಾಟ್ ಮಾರಿಸನ್ ಹೇಳಿದ್ದಾರೆ.

ಚೀನಾದ ಕಂಪನಿಗಳ ಜತೆ ವ್ಯವಹರಿಸುವ ಬ್ಯಾಂಕ್ಗಳಿಗೆ ದಂಡ ವಿಧಿಸುವ ನೂತನ ಕಾನೂನನ್ನು ಅಮೆರಿಕ ಜಾರಿ ಮಾಡಿದೆ.

30 ಲಕ್ಷ ಹಾಂಗ್ಕಾಂಗ್ ನಿವಾಸಿಗಳಿಗೆ ಆಶ್ರಯ ನೀಡಲು ಬ್ರಿಟನ್ ಸಿದ್ಧವಿದೆ. ಬ್ರಿಟನ್ನಲ್ಲಿ ಐದು ವರ್ಷ ಕಳೆದ ನಂತರ ಅವರು ಪೌರತ್ವಕ್ಕೆ ಅರ್ಜಿ ಹಾಕಬಹುದು.
–ಡಾಮಿನಿಕ್ ರಾಬ್, ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ

ಹಾಂಗ್ಕಾಂಗ್ ನಿವಾಸಿಗಳಿಗೆ ಬ್ರಿಟನ್ ಪೌರತ್ವ ನೀಡಿದರೆ, ಆ ದೇಶವೇ ಸಹಿ ಮಾಡಿದ್ದ ಒಪ್ಪಂದದ ಉಲ್ಲಂಘನೆಯಾಗುತ್ತದೆ. ಪ್ರತೀಕಾರವನ್ನು ಎದುರಿಸಬೇಕಾಗುತ್ತದೆ.
–ಚೀನಾ

ಹಾಂಗ್ಕಾಂಗ್ ನಿವಾಸಿಗಳಿಗೆ ಆಶ್ರಯ ಘೋಷಿಸುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಅವರಿಗೆ ಇಲ್ಲಿ ಸ್ವರ್ಗದಂತಹ ನೆಲೆ ಕಲ್ಪಿಸುತ್ತೇವೆ.
–ಸ್ಕಾಟ್ ಮಾರಿಸನ್, ಆಸ್ಟ್ರೇಲಿಯಾಪ್ರಧಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.