ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್‌ಐಸಿ ಮೀಸಲು ಸ್ಥಾನಗಳಿಗೆ ಅರ್ಹತೆ ಪಡೆದಿಲ್ಲ: ಚುನಾವಣಾ ಅಯೋಗ

Published 23 ಜೂನ್ 2024, 16:23 IST
Last Updated 23 ಜೂನ್ 2024, 16:23 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷದ ಬೆಂಬಲಿತ ಸುನ್ನಿ ಇತ್ತೆಹಾದ್‌ ಕೌನ್ಸಿಲ್‌, ಮೀಸಲು ಸ್ಥಾನಗಳಿಗೆ ಅರ್ಹವಲ್ಲ ಎಂದು ಚುನಾವಣಾ ಅಯೋಗವು ಸುಪ್ರೀಂ ಕೋರ್ಟ್‌ಗೆ ಹೇಳಿಕೆ ಸಲ್ಲಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಪಕ್ಷವು ಮುಸ್ಲಿಮರೇತರರು ಮಂಡಳಿಯ ಭಾಗವಾಗಲು ಅವಕಾಶ ನೀಡದಿರುವುದು ಇದಕ್ಕೆ ಕಾರಣ ಎಂದು ಆಯೋಗ ತಿಳಿಸಿದೆ. ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಹಿಳಾ ಮತ್ತು ಅಲ್ಪಸಂಖ್ಯಾತರಿಗೆ ಮೀಸಲಾದ ಸ್ಥಾನಗಳಿಗೆ ಸ್ಪರ್ಧಿಸುವುದನ್ನು ತಿರಸ್ಕರಿಸಿದ್ದ ಆಯೋಗದ ಕ್ರಮ ಪ್ರಶ್ನಿಸಿ ಸುನ್ನಿ ಇತ್ತೆಹಾದ್ ಕೌನ್ಸಿಲ್‌ ಸಲ್ಲಿಸಿದ್ದ ಅರ್ಜಿಗೆ ಈ ಪ್ರತಿಕ್ರಿಯೆ ದಾಖಲಿಸಿದೆ.

ಮೀಸಲು ಸ್ಥಾನಗಳಿಗೆ ಸ್ಪರ್ಧಿಸಲು ಮಂಡಳಿ ಅರ್ಹತೆ ಪಡೆದಿಲ್ಲ. ನಿಗದಿತ ಗಡುವಿನಲ್ಲಿ ಮೀಸಲು ಸ್ಥಾನಗಳಿಗೆ ನಾಮನಿರ್ದೇಶನ ಮಾಡಿದ್ದ ಅಭ್ಯರ್ಥಿಗಳ ಪಟ್ಟಿ ನೀಡಲು ಪಕ್ಷ ವಿಫಲವಾಗಿತ್ತು ಎಂದು ತಿಳಿಸಿರುವುದಾಗಿ ‘ಜಿಯೊ ನ್ಯೂಸ್‌’ ವರದಿ ಮಾಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT