ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಮ್ರಾನ್ ಖಾನ್‌ ಸೆಕ್ಸ್ ಸಂಭಾಷಣೆ ಆಡಿಯೊ ಸೋರಿಕೆ: ಇದು ನಕಲಿ ಎಂದ ‘ಪಿಟಿಐ‘

ಇಸ್ಲಾಮಾಬಾದ್: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಹಿಳೆಜೊತೆ ಸೆಕ್ಸ್ ಕುರಿತು ಮಾತನಾಡಿರುವ ಆಡಿಯೊ ಸೋರಿಕೆಯಾಗಿದೆ. ಆದರೆ ಇದು ನಕಲಿ ಎಂದು ಇಮ್ರಾನ್‌ ಖಾನ್‌ ನಾಯಕತ್ವದ‘ಪಾಕಿಸ್ತಾನ್‌ ತೆಹರೀಕ್‌ ಇ ಇನ್ಸಾಫ್‌‘(ಪಿಟಿಐ) ಪಕ್ಷ ಹೇಳಿದೆ.

ಮಹಿಳೆಯೊಬ್ಬರುಇಮ್ರಾನ್ ಖಾನ್‌ ಜತೆಗೆ ಸೆಕ್ಸ್‌ ಸಂಭಾಷಣೆ ನಡೆಸಿರುವ ಎರಡು ಆಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದು ಇಮ್ರಾನ್‌ ಖಾನ್‌ ಅವರ ಅಸಲಿ ಧ್ವನಿ ಎಂದು ಪಾಕಿಸ್ತಾನ್‌ ಪೀಪಲ್‌ ಪಾರ್ಟಿ ಹಾಗೂ ಪಾಕಿಸ್ತಾನ್‌ ಮುಸ್ಲಿಂ ಲೀಗ್‌ ಪಕ್ಷಗಳು ಆರೋಪ ಮಾಡಿವೆ. ಆದರೆ ಪಿಟಿಐ ಪಕ್ಷ ಈ ಆರೋಪವನ್ನು ತಳ್ಳಿ ಹಾಕಿದೆ.

ಆಡಿಯೊದಲ್ಲಿ ಏನಿದೆ?

ಇಮ್ರಾನ್‌ ಖಾನ್‌ ಅವರು ಮಹಿಳೆಯೊಬ್ಬರಿಗೆ ತನ್ನ ಬಳಿ ಬರುವಂತೆ ಕರೆಯುತ್ತಾರೆ. ಆ ಮಹಿಳೆಈಗ ಬರಲು ಸಾಧ್ಯವಿಲ್ಲ,ಮತ್ತೊಂದು ದಿನ ಬರುತ್ತೇನೆ ಎಂದು ಹೇಳುತ್ತಾರೆ, ಇದಕ್ಕೆ ಪ್ರತಿಕ್ರಿಯಿಸಿರುವ ಇಮ್ರಾನ್‌ ಖಾನ್‌, ಆ ದಿನನನ್ನ ಎಲ್ಲಾ ಕಾರ್ಯಕ್ರಮಗಳನ್ನು ಬದಲಾಯಿಸುತ್ತೇನೆ ಎಂದು ಹೇಳುತ್ತಾರೆ.

ಇಮ್ರಾನ್ ಖಾನ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿನ ಆಡಿಯೊಗಳು ಸೋರಿಕೆಯಾಗಿವಎಂದು ಹೇಳಲಾಗುತ್ತಿದೆ. ಪ್ರಧಾನಿ ಕಚೇರಿಯಲ್ಲಿ ಇಮ್ರಾನ್‌ ಖಾನ್‌ ಏನೆಲ್ಲಾ ಆಟವಾಡಿದ್ದಾರೆ ಎಂದು ಹಲವು ಪಕ್ಷಗಳ ರಾಜಕೀಯ ನಾಯಕರು ಟೀಕೆ ಮಾಡಿದ್ದಾರೆ.

ಪತ್ರಕರ್ತ ಸೈಯದ್ ಆಲಿ ಹೈದರ್ ಎಂಬುವರು ಯುಟ್ಯೂಬ್‌ ಮೂಲಕ ಈ ಆಡಿಯೊ ಕ್ಲಿಪ್‌ಸೋರಿಕೆ ಮಾಡಿದ್ದರು.

ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ಇನ್ನು ಕೆಲವೇ ತಿಂಗಳುಇರುವಾಗಲೇ ಆಡಿಯೊ ಬಹಿರಂಗವಾಗಿದೆ. ಇದೀಗ ಇಮ್ರಾನ್‌ ಖಾನ್‌ ಅವರರಾಜಕೀಯ ಎದುರಾಳಿಗಳಿಗೆ ಅಸ್ತ್ರ ಸಿಕ್ಕಂತಾಗಿದೆ. ಇನ್ನು ಪಿಟಿಐ ಪಕ್ಷಕ್ಕೆ ತೀವ್ರ ಮುಜುಗರವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT