ಬ್ಯೂನಸ್ ಐರಿಸ್: ಎರಡು ದಿನಗಳ ಪ್ರವಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ರಾತ್ರಿ ಇಲ್ಲಿನ ಬ್ಯೂನಸ್ ಏರೀಸ್ ನಗರಕ್ಕೆ ಬಂದಿಳಿದರು. ಭೇಟಿ ವೇಳೆ, ಎರಡು ರಾಷ್ಟ್ರಗಳ ನಡುವಿನ ಸಹಕಾರದ ಮರುಪರಿಶೀಲನೆ ಹಾಗೂ ಪ್ರಮುಖ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಒತ್ತು ನೀಡಲಿದ್ದಾರೆ.

ಏಜೆಶಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದ ಮೋದಿ ಅವರನ್ನು ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಯಿತು. ಅನಿವಾಸಿ ಭಾರತೀಯರು ‘ಮೋದಿ– ಮೋದಿ’, ‘ಭಾರತ್ ಮಾತಾಕೀ ಜೈ’ ಘೋಷಣೆ ಕೂಗಿ ಸಂಭ್ರಮಿಸಿದರು.

‘ಉಭಯ ರಾಷ್ಟ್ರಗಳ ಸಂಬಂಧವೃದ್ಧಿ ನಿಟ್ಟಿನಲ್ಲಿ ಬ್ಯೂನಸ್ ಏರೀಸ್ಗೆ ಬಂದಿಳಿದಿದ್ದೇನೆ. ಅರ್ಜೆಂಟೀನಾದ ಅಧ್ಯಕ್ಷ ಜೇವಿಯರ್ ಮಿಲೆ ಅವರನ್ನು ಭೇಟಿಯಾಗಲು ಎದುರು ನೋಡುತ್ತಿದ್ದು, ವಿಸ್ತೃತ ಮಾತುಕತೆ ನಡೆಸಲಾಗುವುದು’ ಎಂದು ಮೋದಿ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

ತಮ್ಮ ಪ್ರವಾಸದ ನಾಲ್ಕನೇ ರಾಷ್ಟ್ರವಾಗಿ ಬ್ರೆಜಿಲ್ಗೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ. ನಂತರ ನಮೀಬಿಯಾಕ್ಕೆ ತೆರಳಿ, ಅಲ್ಲಿಂದ ಸ್ವದೇಶಕ್ಕೆ ಮರಳಲಿದ್ದಾರೆ.

57 ವರ್ಷಗಳ ಬಳಿಕ ಅರ್ಜೆಂಟೀನಾಕ್ಕೆ ತೆರಳಿದ ಪ್ರಧಾನಮಂತ್ರಿಯ ಮಟ್ಟದ ದ್ವಿಪಕ್ಷೀಯ ನಿಯೋಗದ ಭೇಟಿ ಇದಾಗಿದೆ. 2018ರಲ್ಲಿ ಜಿ–20 ಶೃಂಗಸಭೆಯಲ್ಲಿ ಭಾಗವಹಿಸುವಾಗ ಪ್ರಧಾನಿ ಮೋದಿ ಭೇಟಿ ನೀಡಿದ್ದು, ಎರಡನೇ ಸಲ ದೇಶಕ್ಕೆ ಭೇಟಿ ನೀಡಿದಂತಾಗಿದೆ.

‘ಅಧ್ಯಕ್ಷ ಮಿಲೆ ಜೊತೆಗಿನ ಮಾತುಕತೆ ವೇಳೆ ರಕ್ಷಣೆ, ಕೃಷಿ, ಗಣಿಗಾರಿಕೆ, ತೈಲ ಹಾಗೂ ಅನಿಲ, ನವೀಕರಿಸಬಹುದಾದ ಇಂಧನ, ವ್ಯಾಪಾರ ಹಾಗೂ ಹೂಡಿಕೆಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚೆ ನಡೆಯಲಿದೆ’ ಎಂದು ಭಾರತೀಯ ವಿದೇಶಾಂಗ ಇಲಾಖೆಯು ತಿಳಿಸಿದೆ.

‘ದ್ವಿಪಕ್ಷೀಯ ಭೇಟಿಯು ಉಭಯ ರಾಷ್ಟ್ರಗಳ ನಡುವಿನ ಬಹುಮುಖಿ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ’ ಎಂದು ಪ್ರಕಟಣೆಯಲ್ಲಿ ಹೇಳಿದೆ.

ಸಂಬಂಧ ವಿಸ್ತರಣೆ; 6 ಒಪ್ಪಂದಗಳಿಗೆ

ಪೋರ್ಟ್ ಆಫ್ ಸ್ಪೇನ್: ಮೂಲಸೌಕರ್ಯ ಹಾಗೂ ಔಷಧ ಉತ್ಪಾದನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರ ಸಂಬಂಧ ಭಾರತ ಹಾಗೂ ಟ್ರಿನಿಡಾಡ್–ಟೊಬಾಗೋ ಆರು ಒಪ್ಪಂದಗಳಿಗೆ ಸಹಿಹಾಕಿದವು. ರಕ್ಷಣೆ ಕೃಷಿ ಆರೋಗ್ಯ ಡಿಜಿಟಲ್ ಹಾಗೂ ಯುಪಿಐ ಕ್ಷೇತ್ರದಲ್ಲಿ ಸಂಭಾವ್ಯ ಸಹಯೋಗದ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಟ್ರಿನಿಡಾಡ್ ಟೊಬಾಗೋ ಪ್ರಧಾನಿ ಕಮಲಾ ಪೆಸ್ರಾದ್ ಬಿಸ್ಸೆಸ್ಸರ್ ಮಾತುಕತೆ ಬಳಿಕ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ‘ಟ್ರಿನಿಡಾಡ್– ಟೊಬಾಗೋಗೆ ಪ್ರಧಾನಿ ಕೈಗೊಂಡಿರುವ ಐತಿಹಾಸಿಕ ಪ್ರವಾಸದಿಂದ ಎರಡು ರಾಷ್ಟ್ರಗಳ ನಡುವಿನ ಬಾಂಧವ್ಯವು ಮತ್ತಷ್ಟು ವೃದ್ಧಿಯಾಗಲಿದೆ’ ಎಂದು ವಿದೇಶಾಂಗ ಇಲಾಖೆಯು ತಿಳಿಸಿದೆ.
.ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗದು: ಡಿಕೆಶಿ.ಚುನಾವಣಾ ಕಾರ್ಯ: ಶಿಕ್ಷಕರಿಗಿಲ್ಲ ವಿನಾಯಿತಿ.ಘಾನಾ ಪ್ರವಾಸ ಮುಗಿಸಿ ಟ್ರಿನಿಡಾಡ್–ಟೊಬ್ಯಾಗೊಗೆ ಮೋದಿ: ಭಾರತೀಯರಿಂದ ಸ್ವಾಗತ.ಬಿಜೆಪಿಗೆ ದಕ್ಷಿಣದ ಮಹಿಳೆ ಸಾರಥ್ಯ?: ನಿರ್ಮಲಾ ಸೇರಿದಂತೆ ಮೂವರ ಹೆಸರು ಮುಂಚೂಣಿಗೆ.ಡ್ರೋನ್: ₹2 ಸಾವಿರ ಕೋಟಿಯ ಪ್ರೋತ್ಸಾಹಕ ಯೋಜನೆ.ಸಂಪಾದಕೀಯ | ದಲೈ ಲಾಮಾ ಉತ್ತರಾಧಿಕಾರಿ ಆಯ್ಕೆ: ಮತ್ತೆ ಬಯಲಾದ ಚೀನಾ ಹುನ್ನಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.