ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲ್ದೀವ್ಸ್‌ನಿಂದ ಭಾರತದ ಸೇನೆ ಸಂಪೂರ್ಣ ವಾಪಸ್: ಮುಯಿಝು ವಕ್ತಾರ

Published 10 ಮೇ 2024, 5:43 IST
Last Updated 10 ಮೇ 2024, 5:43 IST
ಅಕ್ಷರ ಗಾತ್ರ

ಮಾಲೆ (ಮಾಲ್ದೀವ್ಸ್‌): ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ನೀಡಿರುವ ಗಡುವಿನಂತೆ, ಭಾರತವು ತನ್ನ ಎಲ್ಲಾ ಸೈನಿಕರನ್ನು ಮಾಲ್ದೀವ್ಸ್‌ನಿಂದ ಹಿಂದಕ್ಕೆ ಕರೆಸಿಕೊಂಡಿದೆ ಎಂದು ಮಾಲ್ದೀವ್ಸ್‌ ಸರ್ಕಾರ ತಿಳಿಸಿದೆ.

ಚೀನಾ ಪರ ಧೋರಣೆಯುಳ್ಳ ನಾಯಕರಾಗಿ ಗುರುತಿಸಿಕೊಂಡಿರುವ ಮುಯಿಝು, ಮೇ 10ರೊಳಗೆ ಭಾರತವು ತನ್ನ ಸಂಪೂರ್ಣ ಮಿಲಿಟರಿ ಸಿಬ್ಬಂದಿಯನ್ನು ಹಿಂದಕ್ಕೆ ಕರೆಯಿಸಿಕೊಳ್ಳಬೇಕು ಎಂದು ಗಡುವು ನೀಡಿದ್ದರು. ಭಾರತೀಯ ಸೇನಾ ಸಿಬ್ಬಂದಿಯನ್ನು ವಾಪಸ್‌ ಕಳುಹಿಸುವುದಾಗಿ ಅವರು, ಕಳೆದ ವರ್ಷ ನಡೆದ ಅಧ್ಯಕ್ಷೀಯ ಚುನಾವಣೆ ವೇಳೆ ಭರವಸೆ ನೀಡಿದ್ದರು.

ಮಾಲ್ದೀವ್ಸ್‌ನಲ್ಲಿದ್ದ ಭಾರತೀಯ ಸೈನಿಕರ ಕೊನೇ ತಂಡವನ್ನು ವಾಪಸ್‌ ಕಳುಹಿಸಲಾಗಿದೆ ಎಂದು ಅಧ್ಯಕ್ಷರ ಕಚೇರಿಯ ಮುಖ್ಯ ವಕ್ತಾರೆ ಹೀನಾ ವಾಲೀದ್ ಅವರು ಸನ್‌.ಎಂವಿ (Sun.mv) ಸುದ್ದಿ ತಾಣಕ್ಕೆ ತಿಳಿಸಿದ್ದಾರೆ.

ದೇಶದಲ್ಲಿ ಎಷ್ಟು ಮಂದಿ ಭಾರತೀಯ ಸೇನೆಯ ಯೋಧರು ನೆಲೆಯೂರಿದ್ದರು ಎಂಬ ವಿವರವನ್ನು ನಂತರ ಬಹಿರಂಗಪಡಿಸಲಾಗುವುದು ಎಂದೂ ಹೇಳಿದ್ದಾರೆ.

ಭಾರತವು ತನ್ನ 51 ಯೋಧರನ್ನು ವಾಪಸ್‌ ಕರೆಯಿಸಿಕೊಂಡಿದೆ ಎಂದು ಮಾಲ್ದೀವ್ಸ್‌ ಇದೇ ವಾರ ಪ್ರಕಟಿಸಿತ್ತು.

ಭಾರತ ಸರ್ಕಾರ ಈ ಹಿಂದೆ ಉಡುಗೊರೆಯಾಗಿದ್ದ ನೀಡಿದ್ದ ಎರಡು ಹೆಲಿಕಾಪ್ಟರ್‌ಗಳು ಮತ್ತು ಡಾರ್ನಿಯರ್‌ ಯುದ್ಧ ವಿಮಾನಗಳ ನಿರ್ವಹಣೆ ಸಲುವಾಗಿ ಭಾರತೀಯ ಸೇನಾ ಸಿಬ್ಬಂದಿ ಮಾಲ್ದೀವ್ಸ್‌ನಲ್ಲಿ ಉಳಿದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT