ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ ಸಮಸ್ಯೆ ಬಗೆಹರಿಸುವಲ್ಲಿ ಭಾರತ–ಪಾಕ್‌ ವಿಫಲ: ವಿಶ್ವಸಂಸ್ಥೆ

Last Updated 8 ಜುಲೈ 2019, 20:15 IST
ಅಕ್ಷರ ಗಾತ್ರ

ಜಿನಿವಾ: ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುವಲ್ಲಿ ಭಾರತ ಮತ್ತು ಪಾಕಿಸ್ತಾನ ಯಾವುದೇ ಗಟ್ಟಿ ನಿಲುವು ತಾಳಲು ವಿಫಲವಾಗಿವೆ ಎಂದು ವಿಶ್ವಸಂಸ್ಥೆ ಸೋಮವಾರ ಹೇಳಿದೆ.

ಭಾರತ ಹಾಗೂ ಪಾಕಿಸ್ತಾನದ ತಪ್ಪು ನಿರ್ಧಾರಗಳ ಬಗ್ಗೆಕಳೆದ ವರ್ಷ ವಿಶ್ವಸಂಸ್ಥೆಯಲ್ಲಿನ ಮಾನವ ಹಕ್ಕುಗಳ ವಿಭಾಗದ ಹೈಕಮಿಷನರ್ ಮೊದಲ ಬಾರಿಗೆ ವರದಿಯೊಂದನ್ನು ನೀಡಿದ್ದರು. ದೀರ್ಘಕಾಲದ ಉದ್ವಿಗ್ನತೆ ಇಲ್ಲವಾಗಿಸಲು ಕ್ರಮ ಕೈಗೊಳ್ಳಬೇಕು ಎಂದೂ ಒತ್ತಾಯ ಇತ್ತು.

ಕಳೆದಹತ್ತು ವರ್ಷದಲ್ಲಿಯೇ ಕಾಶ್ಮೀರದಲ್ಲಿ ಮೃತಪಟ್ಟ ನಾಗರಿಕರ ಸಂಖ್ಯೆ ಹಿಂದೆಂದಿಗಿಂತ ಹೆಚ್ಚಿದೆ ಎಂದು ವಿಶ್ವಸಂಸ್ಥೆಯ ಹೊಸ ವರದಿ ಹೇಳಿದೆ.

ಭಾರತದ ಭದ್ರತಾ ಪಡೆಗಳುಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಗಡಿ ಉಲ್ಲಂಘನೆ ಮಾಡಿರುವ ಹೊಣೆ ಹೊತ್ತುಕೊಂಡಿಲ್ಲ ಎಂದೂ ವರದಿ ಹೇಳಿದೆ. ವಿಶ್ವಸಂಸ್ಥೆಯ ಹೊಸ ವರದಿಯಲ್ಲಿಯೂ ಹಳೆ ವರದಿಯಲ್ಲಿರುವ ತಪ್ಪುಗಳೇ ಪುನರಾವರ್ತನೆ ಆಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿದೆ.

ಪ್ರತಿಭಟನೆ ದಾಖಲಿಸಿದ ಭಾರತ
ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಕುರಿತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಬಿಡುಗಡೆ ಮಾಡಿರುವ ವರದಿ ವಿರುದ್ಧ ಭಾರತ ತೀವ್ರ ಪ್ರತಿಭಟನೆ ದಾಖಲಿಸಿದೆ. ಇದು ಹಿಂದಿನ ‘ಸುಳ್ಳು ಮತ್ತು ಪ್ರೇರಿತ’ ನಿರೂಪಣೆಯ ಮುಂದುವರಿದ ಭಾಗ ಎಂದು ಪ್ರತಿಪಾದಿಸಿದೆ. ಪ್ರಮುಖ ಸಮಸ್ಯೆಯಾಗಿರುವ ಗಡಿಯಾಚೆಗಿನ ಭಯೋತ್ಪಾದನೆಯನ್ನು ಪಾಕಿಸ್ತಾನ ನಿರ್ಲಕ್ಷಿಸಿದೆ ಎಂದು ಹೇಳಿದೆ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್‌ ಕಚೇರಿ (ಒಎಚ್‌ಸಿಎಚ್‌ಆರ್‌) ಕಾಶ್ಮೀರದ ಬಗ್ಗೆ ತನ್ನ ಮೊದಲ ವರದಿಯನ್ನು ಕಳೆದ ವರ್ಷ ಬಿಡುಗಡೆ ಮಾಡಿತ್ತು. ಆ ವರದಿಯನ್ನು ಪರಿಷ್ಕರಿಸಿ ಸೋಮವಾರ ಬಿಡುಗಡೆ ಮಾಡಿದ್ದು, ‘ಭಾರತ ಅಥವಾ ಪಾಕಿಸ್ತಾನವು ಯಾವುದೇ ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಕಳವಳ ವ್ಯಕ್ತಪಡಿಸಿದೆ.

‘ಪಾಕಿಸ್ತಾನದಿಂದ ಗಡಿಯಾಚೆಗಿನ ಭಯೋತ್ಪಾದಕರ ದಾಳಿಯಿಂದ ಉಂಟಾಗಿರುವ ಪರಿಸ್ಥಿತಿ ಬಗ್ಗೆ ಉಲ್ಲೇಖಿಸದೇ ವಿಶ್ಲೇಷಿಸಲಾಗಿದೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಜತೆಗೆ ಭಯೋತ್ಪಾದನೆಯನ್ನು ಬಹಿರಂಗವಾಗಿ ಪ್ರಾಯೋಜಿಸುತ್ತ ಬಂದಿರುವ ದೇಶದೊಂದಿಗೆ ಕೃತಕ ಸಮಾನತೆಯನ್ನು ಸೃಷ್ಟಿಸುವ ಯೋಜಿತ ಪ್ರಯತ್ನವೆಂದು ಕಂಡುಬರುತ್ತದೆ’ ಎಂದು ಹೇಳಿರುವ ಅವರು, ಈ ಬಗ್ಗೆ ಪ್ರತಿಭಟನೆ ದಾಖಲಿಸಿದ್ದೇವೆ ಎಂದು ತಿಳಿಸಿದ್ದಾರೆ.

*
ವರದಿಯಲ್ಲಿನ ಅಂಶಗಳು ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಉಲ್ಲಂಘಿಸಿವೆ. ಭಯೋತ್ಪಾದನೆಪ್ರಮುಖ ಸಮಸ್ಯೆಯನ್ನು ನಿರ್ಲಕ್ಷಿಸಿದೆ.
-ರವೀಶ್‌ ಕುಮಾರ್‌, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT