ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡತನ ಹೋಗಲಾಡಿಸುವಲ್ಲಿ ಭಾರತ ಮುಂದು: ವಿಶ್ವಸಂಸ್ಥೆಯಿಂದ ಮೆಚ್ಚುಗೆ 

15 ವರ್ಷಗಳಲ್ಲಿ ಬಡತನದಿಂದ ಹೊರಬಂದ 41 ಕೋಟಿ ಮಂದಿ
Published 11 ಜುಲೈ 2023, 22:30 IST
Last Updated 11 ಜುಲೈ 2023, 22:30 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಭಾರತದಲ್ಲಿ 15 ವರ್ಷಗಳ ಅವಧಿಯಲ್ಲಿ 41.5 ಕೋಟಿ ಮಂದಿ ಬಡತನದಿಂದ ಹೊರಬಂದಿದ್ದಾರೆ ಎಂದು ವಿಶ್ವಸಂಸ್ಥೆ ಮಂಗಳವಾರ ಹೇಳಿದೆ. ಅಲ್ಲದೆ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದ ಬಹುದೊಡ್ಡ ಸಾಧನೆ ಇದು ಎಂದು ಬಣ್ಣಿಸಿದೆ.

ಯುನೈಟೆಡ್ ನೇಷನ್ಸ್‌ ಡೆವಲಪ್‌ಮೆಂಟ್‌ ಪ್ರೋಗ್ರಾಮ್‌ (ಯುಎನ್‌ಡಿಪಿ) ಮತ್ತು ‘ಆಕ್ಸ್‌ಫರ್ಡ್ ಪಾವರ್ಟಿ ಆ್ಯಂಡ್‌ ಹ್ಯೂಮನ್ ಡೆವಲಪ್‌ಮೆಂಟ್‌ ಇನಿಷಿಯೇಟಿವ್‌ ಜಂಟಿಯಾಗಿ ಸಿದ್ಧಪಡಿಸಿರುವ ‘ಜಾಗತಿಕ ಬಹುಆಯಾಮ ಬಡತನ ಸೂಚ್ಯಂಕ (ಎಂಪಿಐ)’ ವರದಿಯನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಬಿಡುಗಡೆ ಮಾಡಲಾಗಿದೆ.

ಭಾರತ ಸೇರಿದಂತೆ 25 ದೇಶಗಳು ಜಾಗತಿಕ ಎಂಪಿಐ ಸೂಚ್ಯಂಕವನ್ನು 15 ವರ್ಷಗಳಲ್ಲಿ ಯಶಸ್ವಿಯಾಗಿ ಅರ್ಧದಷ್ಟು ಇಳಿಸಿವೆ. ತ್ವರಿತವಾಗಿ ಅಭಿವೃದ್ಧಿ ಸಾಧಿಸಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ವಿಶ್ವಸಂಸ್ಥೆ ಅಭಿಪ್ರಾಯಪಟ್ಟಿದೆ.  

ಚೀನಾ, ಕಾಂಬೋಡಿಯಾ, ಕಾಂಗೋ, ಇಂಡೋನೇಷ್ಯಾ, ಮೊರಾಕೊ, ಸೆರ್ಬಿಯಾ ಮತ್ತು ವಿಯೆಟ್ನಾಂ ಸಹ 25 ದೇಶಗಳ ಪಟ್ಟಿಯಲ್ಲಿವೆ. 

ಆದರೆ, ಕೋವಿಡ್‌ ಸಾಂಕ್ರಾಮಿಕ ನಂತರದ ದತ್ತಾಂಶದ ಕೊರತೆಯು ಬಡತನದ ಮೇಲೆ ಸಾಂಕ್ರಾಮಿಕವು ಉಂಟುಮಾಡಿದ ಪರಿಣಾಮಗಳ ಬಗ್ಗೆ ತಿಳಿಯಲು ತೊಡಕಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ವರದಿಯ ಪ್ರಕಾರ ವಿಶ್ವದ 110 ದೇಶಗಳಲ್ಲಿ 110 ಕೋಟಿ ಮಂದಿ ಬಹು ಆಯಾಮದ ಬಡತನದಲ್ಲಿ ಸಿಲುಕಿದ್ದಾರೆ. ವಿಶ್ವದ ಪ್ರತಿ 6 ಮಂದಿ ಬಡವರ ಪೈಕಿ ಆಫ್ರಿಕಾದ ಸಹರಾ ಉಪಖಂಡ (53.4 ಕೋಟಿ) ಮತ್ತು ದಕ್ಷಿಣ ಏಷ್ಯಾದ (38.9 ಕೋಟಿ) ಐವರಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.  

ಭಾರತವು ಕಳೆದ ಏಪ್ರಿಲ್‌ನಲ್ಲಿ 142.86 ಕೋಟಿ ಜನಸಂಖ್ಯೆಯನ್ನು ಹೊಂದುವ ಮೂಲಕ ಚೀನಾವನ್ನು ಮೀರಿಸಿ, ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆಯ ರಾಷ್ಟ್ರವಾಗಿ ಹೊರಹೊಮ್ಮಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT