ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕೊರಿಯಾ ಜತೆ ಸಂಬಂಧ ವೃದ್ಧಿಗೆ ಭಾರತ ಒಲವು

Published 6 ಮಾರ್ಚ್ 2024, 14:13 IST
Last Updated 6 ಮಾರ್ಚ್ 2024, 14:13 IST
ಅಕ್ಷರ ಗಾತ್ರ

ಸೋಲ್‌: ಭಾರತವು ದಕ್ಷಿಣ ಕೊರಿಯಾದ ಜತೆಗೆ ತನ್ನ ಕಾರ್ಯತಂತ್ರದ ಪಾಲುದಾರಿಕೆಯನ್ನು ನಿರ್ಣಾಯಕ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳು, ಸೆಮಿಕಂಡಕ್ಟರ್‌ಗಳು, ಹಸಿರು ಜಲಜನಕದಂತಹ ಕ್ಷೇತ್ರಗಳತ್ತ ವಿಸ್ತರಿಸಲು ಬಯಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಬುಧವಾರ ಹೇಳಿದರು.

ಈ ಮೂಲಕ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಭಾರತ ಬಯಸುತ್ತದೆ ಎಂದು ಅವರು ಪ್ರತಿಪಾದಿಸಿದರು. 

ದಕ್ಷಿಣ ಕೊರಿಯಾದ ವಿದೇಶಾಂಗ ಸಚಿವ ಚೋ ಟೇ–ಯುಲ್‌ ಅವರ ಜತೆಗೆ ಸೋಲ್‌ನಲ್ಲಿ ನಡೆದ ಭಾರತ– ದಕ್ಷಿಣ ಕೊರಿಯಾ ಜಂಟಿ ಆಯೋಗದ 10ನೇ ಸಭೆಯಲ್ಲಿ ‌ಅವರು ಮಾತನಾಡಿದರು.

ಉಭಯ ದೇಶಗಳ ಪ್ರತಿನಿಧಿಗಳು ರಕ್ಷಣೆ, ವಿಜ್ಞಾನ– ತಂತ್ರಜ್ಞಾನ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿನ ಸಹಕಾರ ವೃದ್ಧಿ ಕುರಿತು ಸಮಗ್ರ ಚರ್ಚೆ ನಡೆಸಿದರು ಎಂದು ಜೈಶಂಕರ್‌ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಅದರ ಜತೆಗೆ ಇಂಡೊ–ಪೆಸಿಫಿಕ್‌ನಲ್ಲಿನ ಬೆಳವಣಿಗೆಗಳು, ಈ ಪ್ರದೇಶದಲ್ಲಿನ ಸವಾಲುಗಳ ಕುರಿತು ಚರ್ಚಿಸಲಾಯಿತು. ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳ ಬಗ್ಗೆಯೂ ಈ ವೇಳೆ ಚರ್ಚಿಸಲಾಯಿತು ಎಂದು ಸಚಿವರು ತಿಳಿಸಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT