ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೋಸ್ಟನ್, ಲಾಸ್ ಏಂಜಲೀಸ್‌ನಲ್ಲಿ ರಾಯಭಾರಿ ಕಚೇರಿ ತೆರೆಯಲಿದ್ದೇವೆ: ಪ್ರಧಾನಿ ಮೋದಿ

Published : 23 ಸೆಪ್ಟೆಂಬರ್ 2024, 2:35 IST
Last Updated : 23 ಸೆಪ್ಟೆಂಬರ್ 2024, 2:35 IST
ಫಾಲೋ ಮಾಡಿ
Comments

ನ್ಯೂಯಾರ್ಕ್‌: ಭಾರತವು ಅಮೆರಿಕದ ಬೋಸ್ಟನ್‌ ಹಾಗೂ ಲಾಸ್ ಏಂಜಲೀಸ್‌ ನಗರಗಳಲ್ಲಿ ಹೊಸ ರಾಯಭಾರಿ ಕಚೇರಿಗಳನ್ನು ತೆರೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಿಳಿಸಿದ್ದಾರೆ.

ಇದರೊಂದಿಗೆ, ಈ ನಗರಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಭಾರತೀಯ ಮೂಲದ ಅಮೆರಿಕನ್ ಸಮುದಾಯದವರ ಬಹುದಿನಗಳ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗಿದೆ.

ಬೋಸ್ಟನ್‌, ಅಮೆರಿಕದ ಫಾರ್ಮಾ ಹಾಗೂ ಶೈಕ್ಷಣಿಕ ರಾಜಧಾನಿ ಎನಿಸಿದ್ದರೆ, ಲಾಸ್ ಏಂಜಲೀಸ್‌ ಹಾಲಿವುಡ್‌ನ ತವರಾಗಿದೆ. ಮುಂದಿನ ಒಲಿಂಪಿಕ್ಸ್‌ಗೆ ಈ (ಲಾಸ್ ಏಂಜಲೀಸ್‌) ನಗರ ಆತಿಥ್ಯ ವಹಿಸಲಿದೆ. ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿರುವ ಎರಿಕ್‌ ಗಾರ್ಸೆಟ್ಟಿ ಅವರು ಲಾಸ್ ಏಂಜಲೀಸ್‌ನ ಮೇಯರ್‌ ಆಗಿದ್ದರು.

ನ್ಯೂಯಾರ್ಕ್‌ನ ನಾಸ್ಸೌನಲ್ಲಿ ಭಾರತೀಯ ಸಮುದಾಯದವರನ್ನುದ್ದೇಶಿಸಿ ಮಾತನಾಡಿದ ಮೋದಿ, 'ಸ್ನೇಹಿತರೇ, ನಮ್ಮ ಸರ್ಕಾರ ಸಿಯಾಟಲ್‌ನಲ್ಲಿ ರಾಯಭಾರಿ ಕಚೇರಿ ತೆರೆಯಲಿದೆ ಎಂದು ಕಳೆದ ವರ್ಷ ಘೋಷಿಸಿದ್ದೆ. ಇದೀಗ ಹೊಸ ಯೋಜನೆಗಳ ಕಾಲ. ಇನ್ನೆರಡು ರಾಯಭಾರ ಕಚೇರಿ ತೆರೆಯುವಂತೆ ನೀವು ಕೇಳಿದ್ದಿರಿ. ನಿಮ್ಮ ಸಲಹೆಯ ನಂತರ ಬೋಸ್ಟನ್‌ ಮತ್ತು ಲಾಸ್‌ ಏಂಜಲೀಸ್‌ನಲ್ಲಿ ರಾಯಭಾರ ಕಚೇರಿ ತೆರೆಯಲು ಭಾರತ ನಿರ್ಧರಿಸಿದೆ' ಎಂದು ಹೇಳಿದ್ದಾರೆ.

ಮೋದಿ ಘೋಷಣೆಯನ್ನು ಬೋಸ್ಟನ್‌ ಹಾಗೂ ಲಾಸ್ ಏಂಜಲೀಸ್‌ ನಗರಗಳಲ್ಲಿನ ಭಾರತೀಯರು ಸ್ವಾಗತಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ತಮ್ಮ ತವರು ಡೆಲವೇರ್‌ ರಾಜ್ಯದ ವಿಲ್ಮಿಂಗ್ಟನ್‌ನಲ್ಲಿ ಶನಿವಾರ ಆಯೋಜಿಸಿದ್ದ 'ಕ್ವಾಡ್‌' ಶೃಂಗ ಸಭೆಯಲ್ಲಿ ಪಾಲ್ಗೊಂಡಿದ್ದ ಮೋದಿ, ಭಾನುವಾರ ನ್ಯೂಯಾರ್ಕ್‌ ತಲುಪಿದ್ದಾರೆ. ಇಂದು ವಿಶ್ವಸಂಸ್ಥೆಯ ಮಹಾ ಅಧಿವೇಶನವನ್ನುದ್ದೇಶಿಸಿ ಮಾತನಾಡಲಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT