ಕೀವ್: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಭಾರತ ಪ್ರಧಾನಿ ನರೇಂದ್ರ ಅವರು ಇಂದು (ಶುಕ್ರವಾರ) ಸಭೆ ನಡೆಸಿದರು. ಈ ವೇಳೆ ಭಾರತ ಮತ್ತು ಉಕ್ರೇನ್ ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿವೆ.
ಈ ಒಪ್ಪಂದಗಳು ಕೃಷಿ, ಆಹಾರ ಉದ್ಯಮ, ಔಷಧ ಮತ್ತು ಸಂಸ್ಕೃತಿ ಹಾಗೂ ಮಾನವೀಯ ನೆರವು ಕ್ಷೇತ್ರಗಳಲ್ಲಿ ಸಹಕಾರವನ್ನು ಒದಗಿಸುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಷ್ಯಾ-ಉಕ್ರೇನ್ ಸಂಘರ್ಷದ ಬಗ್ಗೆಯೂ ಮಾತುಕತೆ...
'ಸದ್ಯ ನಡೆಯುತ್ತಿರುವ ಸಂಘರ್ಷದ ಕುರಿತು ಚರ್ಚಿಸಿದೆವು. ಶಾಂತಿ ಕಾಪಾಡುವುದೇ ಈ ಸಭೆಯ ಪ್ರಮುಖ ನಿರ್ಧಾರವಾಗಿತ್ತು. ಮಾನವೀಯತೆಯ ಒಳಿತಿಗಾಗಿ ಸಂಘರ್ಷವನ್ನು ಶಾಂತಿಯುತವಾಗಿ ಬಗೆಹರಿಸಬೇಕಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
We also had discussions about the ongoing conflict. It is of topmost importance that peace be maintained. A peaceful solution to the conflict is best for humanity. pic.twitter.com/7nv7SjkvbQ
— Narendra Modi (@narendramodi) August 23, 2024
ಚರ್ಚೆ ಫಲಪ್ರದ...
'ಕೀವ್ನಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಫಲಪ್ರದ ಚರ್ಚೆ ನಡೆಸಿದ್ದೇನೆ. ಉಕ್ರೇನ್ ಜೊತೆ ಆರ್ಥಿಕ ಸಂಬಂಧ ಗಾಢವಾಗಿಸಲು ಭಾರತ ಉತ್ಸುಕವಾಗಿದೆ. ಕೃಷಿ, ತಂತ್ರಜ್ಞಾನ, ಫಾರ್ಮಾ ಮತ್ತು ಇತರೆ ಕ್ಷೇತ್ರಗಳಲ್ಲಿ ಸಹಕಾರವನ್ನು ಉತ್ತೇಜಿಸಲು ಮಾತುಕತೆ ನಡೆಸಿದ್ದೇವೆ. ಸಾಂಸೃತಿಕ ಕ್ಷೇತ್ರದಲ್ಲೂ ಸಂಬಂಧ ಗಟ್ಟಿ ಮಾಡಲು ಚರ್ಚೆ ನಡೆಸಿದ್ದೇವೆ' ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
President @ZelenskyyUa and I had very productive discussions in Kyiv today. India is eager to deepen economic linkages with Ukraine. We discussed ways to boost cooperation in agriculture, technology, pharma and other such sectors. We also agreed to further cement cultural… pic.twitter.com/EOrRyHeNX7
— Narendra Modi (@narendramodi) August 23, 2024
ಉಕ್ರೇನ್ಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ...
ನರೇಂದ್ರ ಮೋದಿ ಅವರು ಉಕ್ರೇನ್ಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಎನಿಸಿದ್ದಾರೆ. ಪೋಲೆಂಡ್ಗೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದ ಮೋದಿ ಅಲ್ಲಿಂದ ಉಕ್ರೇನ್ ರಾಜಧಾನಿ ಕೀವ್ಗೆ ತೆರಳಿದರು. ಸುಮಾರು 10 ತಾಸಿನ ರೈಲು ಪ್ರಯಾಣದ ಬಳಿಕ ಪ್ರಧಾನಿ ಮೋದಿ ಅವರು ಉಕ್ರೇನ್ ರಾಜಧಾನಿಗೆ ತಲುಪಿದರು.
Sharing my remarks during meeting with President @ZelenskyyUa. https://t.co/uqnbBsHfmf
— Narendra Modi (@narendramodi) August 23, 2024
President @ZelenskyyUa and I paid homage at the Martyrologist Exposition in Kyiv.
— Narendra Modi (@narendramodi) August 23, 2024
Conflict is particularly devastating for young children. My heart goes out to the families of children who lost their lives, and I pray that they find the strength to endure their grief. pic.twitter.com/VQH1tun5ok
ನರೇಂದ್ರ ಮೋದಿ, ವೊಲೊಡಿಮಿರ್ ಝೆಲೆನ್ಸ್ಕಿ
(ಪಿಟಿಐ ಚಿತ್ರ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.