ನವದೆಹಲಿ: ಚೀನಾದೊಂದಿಗೆ ಗಡಿ ಸಂಬಂಧ ಸಂಘರ್ಷ ನಡೆಯುತ್ತಿರುವ ಸಂದರ್ಭದಲ್ಲೇ, ಹಿಂದೂ ಮಹಾಸಾಗರ-ಪೆಸಿಫಿಕ್ ಪ್ರದೇಶದಲ್ಲಿ ಚೀನಾ ಪ್ರಾಬಲ್ಯವನ್ನು ನಿಯಂತ್ರಿಸುವ ಉದ್ದೇಶದ ಕ್ವಾಡ್ ಒಕ್ಕೂಟದ ನೌಕಾಪಡೆಗಳ ಸಮರಾಭ್ಯಾಸ ಮಂಗಳವಾರ ಆರಂಭವಾಗಿದೆ.

ಬಂಗಾಳ ಕೊಲ್ಲಿಯಲ್ಲಿ ನಡೆ ಯುತ್ತಿರುವ ಈ ಸಮರಾಭ್ಯಾಸದಲ್ಲಿ ಆಸ್ಟ್ರೇಲಿಯಾ, ಜಪಾನ್ ಮತ್ತು ಅಮೆರಿಕದ ನೌಕೆಗಳು ಭಾಗಿಯಾಗಿವೆ. ಭಾರ ತದ ಎರಡು ಯುದ್ಧನೌಕೆಗಳು, ಒಂದುಕರಾವಳಿ ಗಸ್ತು ವಿಮಾನ ಮತ್ತು ಒಂದು ಜಲಾಂತರ್ಗಾಮಿ ನೌಕೆ ಈ ಮೂರೂ ದೇಶಗಳ ನೌಕೆಗಳಿಗೆ ಜತೆಯಾಗಿವೆ. ‘ಹಿಂದೂ ಮಹಾಸಾಗರ-ಪೆಸಿಫಿಕ್ ಸಮುದ್ರ ಪ್ರದೇಶದಲ್ಲಿ ಮುಕ್ತ, ಸ್ವತಂತ್ರ ಮತ್ತು ನಿಯಮಕ್ಕೆ ಬದ್ಧವಾದ ಸಮುದ್ರಯಾನವನ್ನು ರಕ್ಷಿಸಲು ಈ ನಾಲ್ಕೂ ರಾಷ್ಟ್ರಗಳ ಬದ್ಧತೆಯನ್ನು ಈ ಸಮರಾಭ್ಯಾಸ ತೋರಿಸುತ್ತದೆ’ ಎಂದು ನೌಕಾಪಡೆ ಅಡ್ಮಿರಲ್ ಕರಂಬೀರ್ ಸಿಂಗ್ ಹೇಳಿದ್ದಾರೆ. ಈಗ ಸಮರಾಭ್ಯಾಸ ನಡೆಯುತ್ತಿರುವ ಪ್ರದೇಶದಿಂದ ಕೆಲವೇ ನೂರು ಕಿ.ಮೀ. ದೂರದಲ್ಲಿರುವ ಚೆನ್ನೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 2019ರ ಅಕ್ಟೋಬರ್‌ನಲ್ಲಿ ಚೀನಾಅಧ್ಯಕ್ಷ ಷಿ ಜಿನ್‌ಪಿಂಗ್ ಅವರನ್ನು ಆದರದಿಂದ ಬರಮಾಡಿಕೊಂಡಿದ್ದರು. ಆದರೆ ಸರಿಯಾಗಿ ಎರಡು ವರ್ಷಗಳ ನಂತರ ಚೀನಾದ ಪ್ರಾಬಲ್ಯವನ್ನು ನಿಯಂತ್ರಿಸುವ ಉದ್ದೇಶದ ಸಮ ರಾಭ್ಯಾಸ ಆರಂಭವಾಗಿದೆ.

ಅಮೆರಿಕ ಕಾರ್ಲ್ ವಿಲ್ಸನ್ ಯುದ್ಧನೌಕೆ ಮತ್ತು ಎರಡು ಇತರ ಯುದ್ಧನೌಕೆಗಳು ಇದರಲ್ಲಿ ಭಾಗಿ ಯಾಗಿವೆ. ಭಾರತದ ಐಎನ್‌ಎಸ್ ರಣ ವಿಜಯ್, ಐಎನ್‌ಎಸ್ ಸಾತ್ಪುರ ನೌಕೆಗಳು ಇದರಲ್ಲಿ ಭಾಗಿಯಾಗಿವೆ. ಜಪಾನ್‌ನ ಸಮುದ್ರ ಸ್ವಯಂ ರಕ್ಷಣಾ ಪಡೆಯ ಜೆಎಸ್ ಕಾಗಾ ಮತ್ತು ಜೆಎಸ್ ಮುರಾಸೇಮ್, ಆಸ್ಟ್ರೇಲಿಯಾ ನೌಕಾಪಡೆಯ ಬಲ್ಲಾರತ್, ಸಿರಿಯಸ್ ನೌಕೆಗಳು ಈ ಸಮರಾಭ್ಯಾಸದಲ್ಲಿ ಭಾಗಿಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.