ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಕಿತ ಐಎಸ್ ಉಗ್ರರು: ಶ್ರೀಲಂಕಾದಲ್ಲೂ ನಡೆಯಲಿದೆ ತನಿಖೆ

Published 27 ಮೇ 2024, 13:55 IST
Last Updated 27 ಮೇ 2024, 13:55 IST
ಅಕ್ಷರ ಗಾತ್ರ

ಕೊಲಂಬೊ: ಭಾರತದ ಅಹಮದಾಬಾದ್‌ ವಿಮಾನನಿಲ್ದಾಣದಲ್ಲಿ ಕಳೆದ ವಾರ ಬಂಧಿಸಲಾದ ಶ್ರೀಲಂಕಾದ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌)ಗೆ ಸೇರಿದ ಶಂಕಿತರು ಎನ್ನಲಾದ ನಾಲ್ವರ ಕುರಿತು ತಾನೂ ತನಿಖೆ ನಡೆಸುವುದಾಗಿ ಶ್ರೀಲಂಕಾ ಸರ್ಕಾರ ಸೋಮವಾರ ತಿಳಿಸಿದೆ.

ಶಂಕಿತರು ಶ್ರೀಲಂಕಾದಲ್ಲಿ ಯಾವುದಾದರೂ ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿದ್ದರೆ ಎನ್ನುವುದನ್ನು ಪತ್ತೆಹಚ್ಚಲು ತನಿಖೆ ನಡೆಸುವುದಾಗಿ ಶ್ರೀಲಂಕಾ ಕಾನೂನು ಸಚಿವ ವಿಜಯದಾಸ ರಾಜಪಕ್ಷೆ ಹೇಳಿದ್ದಾರೆ.

ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳವು (ಎಟಿಎಸ್) ಮೇ 19ರಂದು ನಾಲ್ವರನ್ನು ಬಂಧಿಸಿತ್ತು. ಶ್ರೀಲಂಕಾದ ಐಎಸ್‌ನೊಂದಿಗೆ ಅವರಿಗೆ ನಂಟು ಇರಬಹುದು ಎಂಬ ಶಂಕೆ ವ್ಯಕ್ತಪಡಿಸಿತ್ತು. ಪಾಕಿಸ್ತಾನ ಮೂಲದ ಒಬ್ಬರ ಸೂಚನೆಯಂತೆ ಭಾರತದಲ್ಲಿಯೂ ವಿಧ್ವಂಸಕ ಕೃತ್ಯಗಳನ್ನು ನಡೆಸಲು ನಾಲ್ವರೂ ಸಂಚು ರೂಪಿಸಿದ್ದರು ಎಂದು ತಿಳಿಸಿತ್ತು.

‘ಬಂಧನಕ್ಕೆ ಒಳಗಾದವರ ವಿಷಯದಲ್ಲಿ ಭಾರತವು ತನ್ನ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಲಿದೆ. ಶ್ರೀಲಂಕಾದಲ್ಲಿ ನಡೆದಿರುವ ಭಯೋತ್ಪಾದನಾ ಚಟುವಟಿಕೆಯಲ್ಲಿ ಆ ನಾಲ್ವರ ಕೈವಾಡ ಇತ್ತೆ ಅಥವಾ ಅವರಿಗೆ ಯಾರಿಂದಲಾದರೂ ವಿಧ್ವಂಸಕ ಕೃತ್ಯ ಎಸಗಲು ಹಣ ಸಂದಾಯವಾಗಿತ್ತೆ ಎನ್ನುವುದನ್ನು ನಾವು ಪರಿಶೀಲಿಸುತ್ತೇವೆ’ ಎಂದು ವಿಜಯದಾಸ ರಾಜಪಕ್ಷೆ ಹೇಳಿದ್ದಾರೆ.

ಶ್ರೀಲಂಕಾ ನಾಗರಿಕರು ಯಾವುದೇ ಭಯೋತ್ಪಾದನಾ ಕೃತ್ಯದ ಕುರಿತು ಹೆದರಬೇಕಿಲ್ಲ. ಅನುಮಾನಾಸ್ಪದ ವ್ಯಕ್ತಿಗಳನ್ನು ಕಂಡರೆ ಗಮನಕ್ಕೆ ತರಬೇಕು ಎಂದು ಶ್ರೀಲಂಕಾ ಪೊಲೀಸ್ ಮುಖ್ಯಸ್ಥ ದೇಶಬಂಧು ತೆನಕ್ಲೂನ್ ಕರೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT