ವಾಷಿಂಗ್ಟನ್:‘ಭಾರತೀಯ ಅಮೆರಿಕನ್ ವೈದ್ಯರು ಭಾರತಕ್ಕಾಗಿ ₹37.05 ಕೋಟಿ ಕೋವಿಡ್ ಪರಿಹಾರ ನಿಧಿ ಸಂಗ್ರಹಿಸಿದ್ದಾರೆ’ ಎಂದು ಭಾರತೀಯ ಮೂಲದ ವೈದ್ಯರ ಸಂಘಟನೆಯು ತಿಳಿಸಿದೆ.

‘ಈ ಹಣವನ್ನು ಭಾರತದ 45 ಆಸ್ಪತ್ರೆಗಳಿಗೆ 2,300 ಆಮ್ಲಜನಕ ಸಾಂದ್ರಕಗಳು, ತಲಾ 100 ವೆಂಟಿಲೇಟರ್‌ಗಳು ಮತ್ತು ನಸಲ್ ಕ್ಯಾನುಲಾ ಉಪಕರಣವನ್ನು ಒದಗಿಸಲು ಒಳಸಲಾಗಿದೆ ಎಂದು ಅಮೆರಿಕನ್ ಅಸೋಸಿಯೇಷನ್ ಫಾರ್ ಫಿಸಿಷಿಯನ್ಸ್ ಆಫ್ ಇಂಡಿಯನ್ ಒರಿಜಿನ್’(ಎಎಪಿಐ) ಮಂಗಳವಾರ ಹೇಳಿದೆ.

‘ಎಎಪಿಐ ಮತ್ತು ಭಾರತೀಯ ಸಮುದಾಯದ ಸದಸ್ಯರ ಉದಾರತೆಯು ಅಭೂತಪೂರ್ವವಾಗಿದೆ’ ಎಂದು ಎಎಪಿಐ ಅಧ್ಯಕ್ಷೆ ಡಾ.ಅನುಪಮಾ ಗೋತಿಮುಕುಲಾ ಹೇಳಿದರು.

‘ಭಾರತದಲ್ಲಿ ಆಗಸ್ಟ್ ಅಂತ್ಯದ ವೇಳೆಗೆ ಮೂರನೇ ಅಲೆ ಬರುವ ಸಾಧ್ಯತೆಗಳಿವೆ ಎಂದು ವರದಿಗಳು ಹೇಳಿವೆ. ಹಾಗಾಗಿ ಎಎಪಿಐಯು ಭಾರತದ ಗ್ರಾಮೀಣ ಪ್ರದೇಶಗಳಿಗೆ ನೆರವು ಮತ್ತು ಅಗತ್ಯ ವಸ್ತುಗಳನ್ನು ಪೂರೈಸುವ ನಿಟ್ಟಿನಲ್ಲಿ ಭಾರತ ಸರ್ಕಾರ ಮತ್ತು ಹಲವು ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದೆ’ ಎಂದು ಸಂಘಟನೆ ತಿಳಿಸಿದೆ.

‘ಮೂರನೇ ಅಲೆಗಾಗಿ ಸಿದ್ಧತೆ ನಡೆಸಲು ಉಳಿದ ನಿಧಿಯನ್ನು ಬಳಸಲಾಗುವುದು’ ಎಂದು ಎಎಪಿಐನ ಉಪಾಧ್ಯಕ್ಷೆ ಡಾ. ಅಂಜನಾ ಸಮೇದರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.