ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಕ್ಷೆಯಾಗಿ ಭಾರತೀಯ ಸಂಜಾತೆ ಶ್ರುತಿ ಆಯ್ಕೆ

ಹಾರ್ವರ್ಡ್‌ ಯೂನಿವರ್ಸಿಟಿ ವಿದ್ಯಾರ್ಥಿ ಸಂಘದ ಚುನಾವಣೆ
Last Updated 20 ನವೆಂಬರ್ 2018, 19:17 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಹಾರ್ವರ್ಡ್‌ ಯೂನಿವರ್ಸಿಟಿಯಲ್ಲಿ ಅತ್ಯಂತ ಪ್ರಭಾವಶಾಲಿ ಸಂಘಟನೆಯಾದ ಪದವಿ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆಯಾಗಿ ಅಮೆರಿಕದಲ್ಲಿರುವ ಭಾರತೀಯ ಸಂಜಾತೆ, 20ರ ಹರೆಯದ ಶ್ರುತಿ ಪಳನಿಯಪ್ಪನ್‌ ಆಯ್ಕೆಯಾಗಿದ್ದಾರೆ.

ಅವರ ಸಹಪಾಠಿ, 20ರ ಹರೆಯದ ಜೂಲಿಯಾ ಹೂಸಾ ಅವರು ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಹೇಳಿದ್ದಾರೆ.

ಶ್ರುತಿ ಮತ್ತು ಹೂಸಾ ಅವರು ಶೇ 41.5ರಷ್ಟು ಮತ ಗಳಿಸಿದ್ದು, ಇವರ ಎದುರಾಳಿಗಳಾದ ನದೈನ್‌ ಎಂ. ಖೌರಿ ಮತ್ತು ಅರ್ನವ್‌ ಅಗರ್‌ವಾಲ್‌ ಶೇ.26.6ರಷ್ಟು ಮತ ಪಡೆದಿದ್ದಾರೆ.

ಶ್ರುತಿ ಅವರ ಪೋಷಕರು 1992ರಲ್ಲಿ ಚೆನ್ನೈನಿಂದ ಅಮೆರಿಕಕ್ಕೆ ವಲಸೆ ಬಂದವರಾಗಿದ್ದಾರೆ. 2016ರ ಜುಲೈನಲ್ಲಿ ಫಿಲಿಡೆಲ್ಫಿಯಾದಲ್ಲಿ ನಡೆದ ಡೆಮಾಕ್ರಟಿಕ್‌ ರಾಷ್ಟ್ರೀಯ ಸಮಾವೇಶದಲ್ಲಿ ಅತ್ಯಂತ ಕಿರಿಯ ಪ್ರತಿನಿಧಿಯಗಾಗಿ ಶ್ರುತಿ ಭಾಗವಹಿಸಿದ್ದರು. ಸದ್ಯ ಅವರು, ವಿದ್ಯಾರ್ಥಿ ಕೌನ್ಸಿಲ್‌ನ ಶಿಕ್ಷಣ ಸಮಿತಿ ಅಧ್ಯಕ್ಷೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT