ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್: ನೀರಿನ ದಾಹ ತಣಿಸಿದ ಭಾರತೀಯ ಉದ್ಯಮಿ

Last Updated 7 ಜೂನ್ 2019, 2:21 IST
ಅಕ್ಷರ ಗಾತ್ರ

ದುಬೈ: ಭಾರತೀಯ ಮೂಲದ ದುಬೈ ಉದ್ಯಮಿಯೊಬ್ಬರುಪಾಕಿಸ್ತಾನದ ಥಾರಪಾರ್ಕರ್‌ ಜಿಲ್ಲೆಯಲ್ಲಿ 60 ಹ್ಯಾಂಡ್‌ಪಂಪ್‌ ವ್ಯವಸ್ಥೆ ಕಲ್ಪಿಸುವ ಮೂಲಕ ಅಲ್ಲಿಯ ಜನರ ನೀರಿನ ದಾಹ ತಣಿಸಿದ್ದಾರೆ.

ಜೋಗಿಂಧರ್‌ ಸಿಂಗ್‌ ಸಲಾರಿಯಾ, ಬಡತನ ರೇಖೆಗಿಂತ ಕೆಳಗಿರುವ ಇಲ್ಲಿಯ ಜನರಿಗೆ ನೆರವಾಗಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಜಿಲ್ಲೆಯ ಬರ ಪರಿಸ್ಥಿತಿಯನ್ನು ಅರಿತ ಜೋಗಿಂಧರ್‌,ಸ್ಥಳೀಯ ಸಾಮಾಜಿಕ ಕಾರ್ಯಕರ್ತರ ಸಹಾಯದಿಂದ ನೀರಿನ ವ್ಯವಸ್ಥೆಯ ಜತೆಗೆ ದವಸ ಧಾನ್ಯಗಳನ್ನು ಕಳುಹಿಸುವ ಮೂಲಕ ಇಲ್ಲಿಯ ಜನರಿಗೆ ನೆರವಿನ ಹಸ್ತ ಚಾಚಿದ್ದಾರೆ.

ಸಾರಿಗೆ ಉದ್ಯಮ ನಡೆಸುತ್ತಿರುವ ಇವರು,ಪೆಹಲ ಚಾರಿಟೆಬಲ್‌ ಟ್ರಸ್ಟ್‌ ಮೂಲಕ ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.1993ರಿಂದ ದುಬೈನಲ್ಲಿ ನೆಲೆಸಿದ್ದಾರೆ.

‘ಪುಲ್ವಾಮಾ ದಾಳಿಯ ದಾಳಿಯ ನಂತರ ಭಾರತ ಮತ್ತು ಪಾಕ್‌ ನಡುವಿನ ಸಂಬಂಧ ಹದಗೆಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ಬಡ ಗ್ರಾಮಗಳಿಗೆ ನೆರವು ನೀಡುವುದು ಅಗತ್ಯ’ ಎಂದು ಜೋಗಿಂಧರ್‌ ಅಭಿಪ್ರಾಯಪಟ್ಟಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಭೀಲ್‌ ಖಂಗರ್‌ ಈ ಯೋಜನೆಯ ಸಾಕಾರಕ್ಕೆ ನೆರವಾಗಿದ್ದಾರೆ. ಈ ಗ್ರಾಮಗಳಲ್ಲಿ ರಸ್ತೆಗಳ ವ್ಯವಸ್ಥೆ ಸಮರ್ಪಕವಾಗಿಲ್ಲ. ಆಸ್ಪತ್ರೆಯೂ 50 ಕಿ.ಮೀ. ದೂರದಲ್ಲಿದೆ. ಮುಖ್ಯರಸ್ತೆಗೆ ಬರಲು ಜನರು 25 ಕಿ.ಮೀ. ಕ್ರಮಿಸಬೇಕು. ಶಿಕ್ಷಣ ವ್ಯವಸ್ಥೆಯೂ ಗುಣಮಟ್ಟದಿಂದ ಕೂಡಿಲ್ಲ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT