ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆನಡಾ: ಅಪಘಾತದಲ್ಲಿ ಭಾರತೀಯ ದಂಪತಿ, ಮಗು ಸಾವು

Published 3 ಮೇ 2024, 14:19 IST
Last Updated 3 ಮೇ 2024, 14:19 IST
ಅಕ್ಷರ ಗಾತ್ರ

ಟೊರಾಂಟೊ: ಕೆನಡಾದ ಟೊರಾಂಟೊದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಭಾರತೀಯ ದಂಪತಿ ಮತ್ತು ಅವರ ಮೂರು ತಿಂಗಳ ಮೊಮ್ಮಗು ಸೇರಿದಂತೆ ನಾಲ್ವರು ಸಾವಿಗೀಡಾಗಿದ್ದಾರೆ. 

ಟೊರಾಂಟೊದ ಪೂರ್ವಕ್ಕೆ 50 ಕಿ.ಮೀ ದೂರದಲ್ಲಿ ಒಂಟಾರಿಯೊ ಪೊಲೀಸರು, ಮದ್ಯದಂಗಡಿಯಲ್ಲಿ ದರೋಡೆ ಮಾಡಿದ ಶಂಕಿತನನ್ನು ಹಿಂಬಾಲಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಭಾರತದಿಂದ ಕೆನಡಾಕ್ಕೆ ಬಂದಿದ್ದ 60 ವರ್ಷದ ವ್ಯಕ್ತಿ, 55 ವರ್ಷದ ಮಹಿಳೆ ಮತ್ತು ಅವರ ಮೂರು ತಿಂಗಳ ಮೊಮ್ಮಗು ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಇದೇ ವಾಹನದಲ್ಲಿದ್ದ ಮಗುವಿನ ತಂದೆ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.   

ಮದ್ಯದಂಗಡಿಯಲ್ಲಿ ದರೋಡೆ ಮಾಡಿದ 21 ವರ್ಷದ ಆರೋಪಿಯು ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ ಎಂದು ಒಂಟಾರಿಯೊದ ವಿಶೇಷ ತನಿಖಾ ದಳ ತಿಳಿಸಿದೆ. ಆದರೆ, ಅಧಿಕಾರಿಗಳು ಮೃತರ ಹೆಸರು ಮತ್ತು ಇತರ ವಿವರಗಳನ್ನು ಬಹಿರಂಗಪಡಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT