ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ 800 ಅಡಿ ಎತ್ತರದಿಂದ ಬಿದ್ದು ಭಾರತೀಯ ದಂಪತಿ ಸಾವು

Last Updated 30 ಅಕ್ಟೋಬರ್ 2018, 4:37 IST
ಅಕ್ಷರ ಗಾತ್ರ

ನ್ಯೂಯಾರ್ಕ್‌:ಕ್ಯಾಲಿಫೋರ್ನಿಯಾದ ಯೋಸೆಮೈಟ್ ರಾಷ್ಟ್ರೀಯ ಉದ್ಯಾನವನದಲ್ಲಿ800 ಅಡಿ ಎತ್ತರದಿಂದ ಬಿದ್ದು ಭಾರತೀಯ ದಂಪತಿ ಮೃತಪಟ್ಟಿದ್ದಾರೆ.

ವಿಷ್ಣು ವಿಶ್ವನಾಥ್ (29) ಮತ್ತು ಮೀನಾಕ್ಷಿ ಮೂರ್ತಿ (30) ಮೃತಪಟ್ಟವರು.ಯೋಸೆಮೈಟ್ ಕಣಿವೆ,ಯೋಸೆಮೈಟ್ ಫಾಲ್ಸ್ ಮತ್ತು ಎಲ್ ಕ್ಯಾಪ್ಟನ್‌ ಅನ್ನು ವೀಕ್ಷಿಸಬಹುದಾದ ಅತಿ ಎತ್ತರದ ಪ್ರದೇಶದಿಂದ (ವಿವ್ ಪಾಯಿಂಟ್‌) ದಂಪತಿ ಕೆಳ ಬಿದ್ದಿದ್ದಾರೆ.

ಇವರು ಕೇರಳದ ಆಲಪ್ಪುಳ ಜಿಲ್ಲೆಯ ಚೆಂಗನ್ನೂರು ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು.

ನ್ಯೂಯಾರ್ಕ್‌ನಲ್ಲಿ ವಾಸವಿದ್ದ ದಂಪತಿ ಇತ್ತೀಚೆಗೆವಿಷ್ಣು ಅವರಿಗೆ ಸ್ಯಾನ್ ಜೋಸ್ ಮೂಲದ ಸಿಸ್ಕೊ ಕಂಪನಿಯಲ್ಲಿ ಸಿಸ್ಟಂ ಎಂಜಿನಿಯರ್ ಆಗಿ ಉದ್ಯೋಗ ದೊರೆತದ್ದರಿಂದಕ್ಯಾಲಿಫೋರ್ನಿಯಾಗೆ ತೆರಳಿದ್ದರು ಎಂದು ಸ್ಯಾನ್ ಫ್ರಾನ್ಸಿಸ್ಕೊ ಕ್ರೋನಿಕಲ್ ವರದಿ ಮಾಡಿದೆ.

ಪ್ರವಾಸದ ಹವ್ಯಾಸ ಹೊಂದಿದ್ದ ದಂಪತಿ ಪ್ರಯಾಣದ ಸಾಹಸದ ಬಗ್ಗೆ ಬರೆದುಕೊಳ್ಳಲೆಂದೇ ‘ಹಾಲಿಡೇಸ್‌ ಆ್ಯಂಡ್ ಹ್ಯಾಪ್ಪಿಲಿಎವೆರ್‌ಆಫ್ಟರ್’ ಎಂಬ ಬ್ಲಾಗ್‌ ಪುಟ ಸಹ ನಿರ್ವಹಿಸುತ್ತಿದ್ದರು.

‘ದಂಪತಿವ್ಯೂವ್ ಪಾಯಿಂಟ್‌ನಿಂದ ಬೀಳಲು ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ. ಏನು ನಡೆದಿರಬಹುದು ಎಂಬುದನ್ನು ತಿಳಿಯಲು ಪ್ರಯತ್ನಿಸುತ್ತಿದ್ದೇವೆ. ಇದೊಂದು ದುರಂತ’ ಎಂದು ಉದ್ಯಾನವನದ ವಕ್ತಾರ ಜಾಮಿ ರಿಚರ್ಡ್ಸ್‌ ಪ್ರತಿಕ್ರಿಯಿಸಿದ್ದಾರೆ.

ವಿಷ್ಣು ವಿಶ್ವನಾಥ್ ಮತ್ತು ಮೀನಾಕ್ಷಿ ಮೂರ್ತಿ ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿದ್ದು, 2014ರಲ್ಲಿ ವಿವಾಹವಾಗಿದ್ದರು.

‘ವಿಷ್ಣು ವಿಶ್ವನಾಥ್ ಮತ್ತು ಮೀನಾಕ್ಷಿ ಮೂರ್ತಿ 2006–2010ರಲ್ಲಿ ಕಂಪ್ಯೂಟರ್ ಸೈನ್ಸ್‌ ಬ್ಯಾಚ್‌ನ ವಿದ್ಯಾರ್ಥಿಗಳಾಗಿದ್ದರು. ಅವರ ದಾರುಣ ಸಾವಿಗೆ ಸಂತಾಪಗಳು’ ಎಂದುಚೆಂಗನ್ನೂರು ಎಂಜಿನಿಯರಿಂಗ್ ಕಾಲೇಜಿನ ಫೇಸ್‌ಬುಕ್ ಪುಟದಲ್ಲಿ ಸಂದೇಶ ಪ್ರಕಟಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT