ಕಠ್ಮಂಡು: ಸೂಕ್ತ ದಾಖಲೆಗಳಿಲ್ಲದೆ 2.6 ದಶಲಕ್ಷ ನೇಪಾಳಿ ರೂಪಾಯಿಗಳನ್ನು (₹16.26 ಲಕ್ಷ) ಸಾಗಿಸುತ್ತಿದ್ದ 26 ವರ್ಷದ ಭಾರತೀಯ ಪ್ರಜೆಯನ್ನು ಮಂಗಳವಾರ ಬಂಧಿಸಲಾಗಿದೆ ಎಂದು ನೇಪಾಳದ ಪೊಲೀಸರು ತಿಳಿಸಿದ್ದಾರೆ.
ಗಡಿ ದಾಟಿ ನೇಪಾಳಕ್ಕೆ ಪ್ರವೇಶಿಸುತ್ತಿದ್ದಾಗ ಮಹೋತ್ತರಿ ಜಿಲ್ಲೆಯಲ್ಲಿ ಭಾರತದ ಪ್ರಜೆ ಸುಮಿತ್ ಸಹಾನನ್ನು ಬಂಧಿಸಲಾಗಿದೆ. ಆತ ತನ್ನ ದ್ವಿಚಕ್ರವಾಹನದ ಆಸನದ ಕೆಳಗೆ ಕರೆನ್ಸಿಯನ್ನು ಅಡಗಿಸಿಟ್ಟಿದ್ದ ಎನ್ನಲಾಗಿದೆ.
ಹೆಚ್ಚಿನ ತನಿಖೆಗಾಗಿ ಸುಮಿತ್ ಸಹಾನನ್ನು ಮಹೋತ್ತರಿ ಜಿಲ್ಲಾ ಕಂದಾಯ ಕಚೇರಿಗೆ ಹಸ್ತಾಂತರಿಸಲಾಗಿದೆ ಎಂದು ಅಲ್ಲಿನ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.