ಲಂಡನ್: ಏಳು ಶಿಶುಗಳನ್ನು ಕೊಂದ ಆರೋಪದಲ್ಲಿ ನರ್ಸ್ ಒಬ್ಬರನ್ನು ದೋಷಿ ಎಂದು ನ್ಯಾಯಾಲಯ ಘೋಷಿಸಿದೆ. ನರ್ಸನ್ನು ಶಿಕ್ಷೆಗೆ ಗುರಿಪಡಿಸಲು ನೆರವು ನೀಡಿದವರಲ್ಲಿ ಉತ್ತರ ಇಂಗ್ಲೆಂಡ್ ಆಸ್ಪತ್ರೆಯೊಂದರ ಭಾರತ ಮೂಲದ ಮಕ್ಕಳ ತಜ್ಞರೊಬ್ಬರೂ ಸೇರಿದ್ದಾರೆ.
33 ವರ್ಷದ ಲೂಸಿ ಲೆಟ್ಬಿ ಏಳು ನವಜಾತ ಶಿಶುಗಳ ಕೊಲೆ ಪ್ರಕರಣ ಹಾಗೂ ಇತರ ಆರು ಶಿಶುಗಳ ಕೊಲೆ ಯತ್ನ ಪ್ರಕರಣದಲ್ಲಿ ದೋಷಿ ಎಂದು ಮ್ಯಾಂಚೆಸ್ಟರ್ ಕ್ರೌನ್ ಕೋರ್ಟ್ ತೀರ್ಪು ನೀಡಿದೆ. ನ್ಯಾಯಾಲಯ ಸೋಮವಾರ ಶಿಕ್ಷೆ ಪ್ರಕಟಿಸಲಿದೆ.
‘ಸಹೋದ್ಯೋಗಿದ್ದ ನರ್ಸ್ ಲೂಸಿ ಲೆಟ್ಬಿ ಬಗ್ಗೆ ಪೊಲೀಸರಿಗೆ ಬೇಗನೆ ಮಾಹಿತಿ ನೀಡಿದ್ದರೆ ಇನ್ನೂ ಕೆಲವು ಜೀವಗಳನ್ನು ಉಳಿಸಬಹುದಿತ್ತು’ ಎಂದು ಚೆಸ್ಟರ್ನ್ ಕೌಂಟೆಸ್ ಆಫ್ ಚೆಸ್ಟರ್ ಆಸ್ಪತ್ರೆಯ ಡಾ.ರವಿ ಜಯರಾಮ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.