ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್‌: ಭಾರತೀಯ ಮೂಲದ ಚಾಲಕನಿಗೆ 16 ವರ್ಷ ಜೈಲು

Last Updated 9 ಡಿಸೆಂಬರ್ 2022, 12:48 IST
ಅಕ್ಷರ ಗಾತ್ರ

ಲಂಡನ್‌: ಮಾದಕವಸ್ತು ಸೇವಿಸಿ ವಾಹನ ಚಲಾಯಿಸುವ ವೇಳೆ ಗರ್ಭಿಣಿ ಹಾಗೂ ಆಕೆಯ ತಂದೆಯ ಸಾವಿಗೆ ಕಾರಣನಾದ ಭಾರತ ಮೂಲದನಿತೇಶ್‌ ಬಿಸ್ಸೆಂದರಿ (31) ಹೆಸರಿನ ಚಾಲಕನಿಗೆ 16 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಗುರುವಾರ ಪ್ರಕರಣ ಕುರಿತ ವಿಚಾರಣೆಯನ್ನು ಕೈಗೊಂಡ ಕ್ಯಾಂಟರ್‌ಬರಿ ಕ್ರೌನ್‌ ಕೋರ್ಟ್‌‌ ಈ ಶಿಕ್ಷೆ ವಿಧಿಸಿದೆ. ಅಲ್ಲದೇ, ಶಿಕ್ಷೆಯ ಅವಧಿ ಮುಗಿದ ನಂತರವೂ 10 ವರ್ಷಗಳ ಕಾಲ ನಿತೇಶ್‌ನನ್ನು ವಾಹನ ಚಾಲನೆಯಿಂದ ಅನರ್ಹಗೊಳಿಸಿ ಕೋರ್ಟ್‌ ಆದೇಶ ಹೊರಡಿಸಿದೆ.

ನಿತೇಶ್‌ ಬಿಸ್ಸೆಂದರಿ ಡ್ರಗ್ಸ್‌ ಸೇವಿಸಿದ್ದರಿಂದ ಚಾಲನೆಯ ನಿಯಂತ್ರಣ ಕಳೆದುಕೊಂಡು ಇಬ್ಬರ ಸಾವಿಗೆ ಕಾರಣನಾಗಿದ್ದಾನೆ. ಅಲ್ಲದೇ ಇಬ್ಬರು ಮಕ್ಕಳು ಸೇರಿದಂತೆ ಮೂವರನ್ನು ಗಾಯಗೊಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.‌

‘ಕೊಕೇನ್‌ ಸೇವಿಸಿದ ಬಳಿಕ, ಅಪಘಾತಕ್ಕೆ ಕಾರಣನಾದ ನಿತೇಶ್‌ನ ವರ್ತನೆ ನಾಚಿಗೇಡಿನ ಸಂಗತಿ. ವಿಚಾರಣೆ ವೇಳೆ ಘಟನೆಯ ಸಂಪೂರ್ಣ ಜವಾಬ್ದಾರಿಯನ್ನು ಹೊರಲು ನಿತೇಶ್‌ ನಿರಾಕರಿಸಿದ್ದ. ಗರ್ಭಿಣಿ ಹಾಗೂ ಆಕೆಯ ತಂದೆ ಸಾಯುತ್ತಿರುವ ವೇಳೆ ಘಟನಾ ಸ್ಥಳದಿಂದ ಓಡಿಹೋಗಿದ್ದ. ಆತನ ಈ ವರ್ತನೆ ಮೃತರ ಕುಟುಂಬಕ್ಕೆ ಹೆಚ್ಚಿನ ನೋವನ್ನುಂಟು ಮಾಡಿದೆ’ ಎಂದು ಕೆಂಟ್‌ನ ಪೊಲೀಸ್‌ ಅಧಿಕಾರಿ ಲಿನ್‌ ವಿಲ್ಜೆಕ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT