ನ್ಯೂಯಾರ್ಕ್: ಅಮೆರಿಕದ ವಾಷಿಂಗ್ಟನ್ನ ಉತ್ತರ ಕ್ಯಾಸ್ಕೇಡ್ಸ್ ರೇಂಜ್ನಲ್ಲಿ ಪರ್ವತಾರೋಹಣ ವೇಳೆ ಬಿರುಗಾಳಿಯಿಂದ ಸಂಭವಿಸಿದ ಅವಘಢದಲ್ಲಿ ಭಾರತ ಮೂಲದ ಟೆಕಿ ವಿಷ್ಣು ಇರಿಗಿರೆಡ್ಡಿ (48) ಸೇರಿ ಮೂವರು ಮೃತಪಟ್ಟಿದ್ದಾರೆ.

ಸಿಯಾಟಲ್ ನಿವಾಸಿಯಾಗಿರುವ ವಿಷ್ಣು ಅವರು ತಮ್ಮ ಮೂವರು ಸ್ನೇಹಿತರೊಂದಿಗೆ ಕ್ಯಾಸ್ಕೇಡ್ಸ್ನಲ್ಲಿ ಪರ್ವತಾರೋಹಣ ಮಾಡುತ್ತಿದ್ದ ವೇಳೆ ಶನಿವಾರ ಬಿರುಗಾಳಿ ಬೀಸಿದೆ. ಇದನ್ನು ಗಮನಿಸಿದ ಅವರು ಪರ್ವತದಿಂದ ಕೆಳಗಿಳಿಯಲು ಯತ್ನಿಸಿದ್ದಾರೆ. ಸುರಕ್ಷಿತವಾಗಿ ಏರಲು ಅಥವಾ ಇಳಿಯಲು ಆಧಾರವಾಗಿ ಬಳಸುವ ಉಪಕರಣವು ವಿಫಲವಾಗಿದೆ. ಇದರಿಂದ ನಾಲ್ವರೂ ಸುಮಾರು 200 ಅಡಿಗಳಷ್ಟು ಕೆಳಗೆ ಬಿದ್ದಿದ್ದಾರೆ. ಈ ವೇಳೆ ಮೂವರು ಮೃತಪಟ್ಟಿದ್ದು, ಒಬ್ಬ ಪರ್ವತಾರೋಹಿ ಬದುಕುಳಿದಿದ್ದಾರೆ.

ವಿಷ್ಣು ಅವರು ಅನುಭವಿ ಪರ್ವತಾರೋಹಿಯಾಗಿದ್ದರು ಎಂದು ಅವರ ಸ್ನೇಹಿತರು ಮತ್ತು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.