ವಾಷಿಂಗ್ಟನ್: ಭಾರತದ ಸೆಹಗಲ್ ಫೌಂಡೇಷನ್ ಅನ್ನು ಅಮೆರಿಕ ನೀಡುವ ಪ್ರತಿಷ್ಠಿತ ‘ಸಿಟಿಜನ್ ಡಿಪ್ಲೊಮಸಿ ಅವಾರ್ಡ್’ಗೆ ಜಂಟಿ ರನ್ನರ್ ಅಪ್ ಆಗಿ (ಕೋ–ರನ್ನರ್ ಅಪ್) ಆಯ್ಕೆ ಮಾಡಲಾಗಿದೆ.

ಮಾನವ ಹಕ್ಕುಗಳ ರಕ್ಷಣೆ, ಮಹಿಳೆಯರ ಸಬಲೀಕರಣ ಹಾಗೂ ಗ್ರಾಮೀಣ ಸಮುದಾಯದ ಏಳಿಗೆ ಕ್ಷೇತ್ರದಲ್ಲಿ ಫೌಂಡೇಷನ್ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಆನ್ಲೈನ್ ಮೂಲಕ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಗ್ಲೋಬಲ್ ಪಬ್ಲಿಕ್ ಅಫೇರ್ಸ್ ವಿಭಾಗದ ಸಹಾಯಕ ಕಾರ್ಯದರ್ಶಿ ಆರೋನ್ ರಿಂಗೆಲ್ ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

‘ಟೆಂಪ್ ಸಿಸ್ಟರ್ ಸಿಸೀಸ್’ ಜಂಟಿ ರನ್ನರ್ ಅಪ್ ಪ್ರಶಸ್ತಿಗೆ ಆಯ್ಕೆಯಾದ ಮತ್ತೊಂದು ಸಂಸ್ಥೆ. ವಿದ್ಯಾರ್ಥಿಗಳ ವಿನಿಮಯ ಕಾರ್ಯಕ್ರಮಗಳ ಮೂಲಕ ದೇಶಗಳ ನಡುವೆ ಸೌಹಾರ್ದತೆ ನೆಲೆಸುವಂತೆ ಮಾಡುವಲ್ಲಿ ಸಂಸ್ಥೆ ಕೈಗೊಂಡ ಕಾರ್ಯವನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ಸಿಟಿಜನ್ ಡಿಪ್ಲೊಮಸಿ ಅವಾರ್ಡ್’ಗೆ ‘ಎವರೇಜ್ ಮೊಹಮ್ಮದ್’ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಅಮೀನ್ ಅಹ್ಮದ್ ಅವರನ್ನು ಆಯ್ಕೆ ಮಾಡಲಾಗಿದೆ.

ಸಂಘರ್ಷದಿಂದ ತತ್ತರಿಸಿರುವ ಸೊಮಾಲಿಯಾದ ಯುವಕರಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ಅಳವಡಿಸುವುದು, ತೀವ್ರಗಾಮಿ ಧೋರಣೆ ವಿರುದ್ಧ ಹೋರಾಟ, ಇಸ್ಲಾಂ ಮೌಲ್ಯಗಳ ನಿಜಾರ್ಥ ತಿಳಿಸಿ, ಅರ್ಥಪೂರ್ಣ ಸಂವಾದ ನಡೆಸುವ ನಿಟ್ಟಿನಲ್ಲಿ ಈ ಸಂಸ್ಥೆ ಶ್ರಮಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.