ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರಾನ್ಸ್‌ನಿಂದ 42 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸಲಿದೆ ಇಂಡೊನೇಷ್ಯಾ

Last Updated 11 ಫೆಬ್ರುವರಿ 2022, 7:37 IST
ಅಕ್ಷರ ಗಾತ್ರ

ಜಕಾರ್ತಾ: ರಕ್ಷಣಾ ಸಾಮರ್ಥ್ಯ ವೃದ್ಧಿಸಿಕೊಳ್ಳಲು ಮುಂದಾಗಿರುವ ಇಂಡೊನೇಷ್ಯಾ, 42 ರಫೇಲ್‌ ಯುದ್ಧ ವಿಮಾನಗಳು ಹಾಗೂ ಎರಡು ಜಲಾಂತರ್ಗಾಮಿ ನೌಕೆಗಳನ್ನು ಫ್ರಾನ್ಸ್‌ನಿಂದ ಖರೀದಿಸಲು ಮುಂದಾಗಿದೆ.

ಇಂಡೊನೇಷ್ಯಾದ ರಕ್ಷಣಾ ಸಚಿವ ಪ್ರಬೊವೊ ಸುಬಿಯಾಂಟೊ ಅವರು ಫ್ರಾನ್ಸ್‌ ರಕ್ಷಣಾ ಸಚಿವಾಲಯದ ಫ್ಲೊರೆನ್ಸ್ ಪಾರ್ಲಿ ಅವರನ್ನು ಗುರುವಾರ ಭೇಟಿಯಾಗಿದ್ದು, ಯುದ್ಧ ವಿಮಾನ ಮತ್ತು ಜಲಾಂತರ್ಗಾಮಿ ಒಪ್ಪಂದ ಏರ್ಪಟ್ಟಿದೆ.

ರಫೇಲ್‌ ಯುದ್ಧ ವಿಮಾನಗಳನ್ನು ಪೂರೈಸುವುದಕ್ಕೆ ಸಂಬಂಧಿಸಿದಂತೆ ಡಸಾಲ್ಟ್‌ ಏವಿಯೇಷನ್‌ನ ಸಿಇಒ ಎರಿಕ್‌ ಟ್ರ್ಯಾಪಿಯರ್‌ ಮತ್ತು ಇಂಡೊನೇಷ್ಯಾ ರಕ್ಷಣಾ ಸಚಿವಾಲಯದ ರಕ್ಷಣಾ ಮೂಲಸೌಕರ್ಯಗಳ ಮುಖ್ಯಸ್ಥ ಯೂಸುಫ್‌ ಜೌಹಾರಿ ನಡುವೆ ಒಪ್ಪಂದ ಆಗಿರುವುದಾಗಿ ವರದಿಯಾಗಿದೆ.

'ಮೊದಲ ಹಂತದಲ್ಲಿ ಆರು ಯುದ್ಧ ವಿಮಾನಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ 36 ಯುದ್ಧ ವಿಮಾನಗಳನ್ನು ಖರೀದಿಸಲಾಗುತ್ತದೆ. ಶಸ್ತ್ರಾಸ್ತ್ರಗಳ ತರಬೇತಿಯಲ್ಲಿ ನಾವು ಪರಸ್ಪರ ಸಹಕಾರ ನೀಡಲಿದ್ದೇವೆ' ಎಂದು ಸುಬಿಯಾಂಟೊ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇಂಡೊನೇಷ್ಯಾದ ಸರ್ಕಾರಿ ಸ್ವಾಮ್ಯದ ಹಡಗು ನಿರ್ಮಾಣ ಸಂಸ್ಥೆ ಪಿಟಿ ಪಿಎಎಲ್‌ ಮತ್ತು ಫ್ರಾನ್ಸ್‌ನ ನೇವಲ್‌ ಗ್ರೂಪ್‌ ಜೊತೆಗೆ ಸ್ಕಾರ್ಪೀನ್‌ ಕ್ಲಾಸ್‌ ಜಲಾಂತರ್ಗಾಮಿ ಖರೀದಿ ಒಪ್ಪಂದ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT