ಜಕಾರ್ತ: ಕಳೆದ ಜನವರಿಯಲ್ಲಿ 9ರಂದು ಜಾವಾ ಸಮುದ್ರಕ್ಕೆ ಬಿದ್ದು 62 ಮಂದಿ ಸಾವಿಗೆ ಕಾರಣರಾಗಿದ್ದ ಇಂಡೋನೇಷ್ಯಾದ ಶ್ರೀವಿಜಯ ಏರ್‌ಲೈನ್‌ನ ಬೋಯಿಂಗ್ 737–500 ವಿಮಾನದ ಕಾಕ್‌ಪಿಟ್ ವಾಯ್ಸ್ ರೆಕಾರ್ಡ್‌ರ್ ಅನ್ನು ಇಂಡೋನೇಷ್ಯಾ ನೌಕಾಪಡೆಯ ಮುಳುಗು ತಜ್ಞರು ಪತ್ತೆ ಮಾಡಿದ್ದಾರೆ.

ಅಪಘಾತ ಸಂಭವಿಸಿ ಮೂರು ದಿನಗಳ ನಂತರ ಡೇಟಾ ರೆಕಾರ್ಡರ್ ಪತ್ತೆ ಮಾಡಿದ ಸ್ಥಳದ ಹತ್ತಿರದಲ್ಲೇ ಈ ಕಾಕ್‌ಪಿಟ್ ರೆಕಾರ್ಡರ್ ಅನ್ನು ಪತ್ತೆ ಮಾಡಿದ್ದಾರೆ ಎಂದು ಸಾರಿಗೆ ಸಚಿವ ಬುಡಿ ಕಾರ್ಯ ಸುಮಡಿ ಹೇಳಿದ್ದಾರೆ.

ಓದಿ:ಇಂಡೊನೇಷ್ಯಾ: 62 ಪ್ರಯಾಣಿಕರ ಹೊತ್ತ ವಿಮಾನ ನಾಪತ್ತೆ

ರೆಕಾರ್ಡರ್‌ನಲ್ಲಿ ಏನಿದೆ ಎಂಬ ಮಾಹಿತಿ ತಕ್ಷಣಕ್ಕೆ ಲಭ್ಯವಾಗಿಲ್ಲ.ವಾಯ್ಸ್ ರೆಕಾರ್ಡರ್ ಹಾನಿಗೊಳಗಾಗಿದ್ದಲ್ಲಿ, ಪತನಕ್ಕೂ ಮುನ್ನ ವಿಮಾನವನ್ನು ನಿಯಂತ್ರಣಕ್ಕೆ ಪಡೆಯಲು ಪೈಲಟ್‌ಗಳು ಏನು ಮಾಡುತ್ತಿದ್ದರು ಅಥವಾ ಯಾವ ರೀತಿ ಪ್ರಯತ್ನದಲ್ಲಿ ವಿಫಲರಾಗಿದ್ದಾರೆ ಎಂಬುದನ್ನು ಅರಿಯಲು ತನಿಖಾಧಿಕಾರಿಗಳಿಗೆ ನೆರವಾಗಬಹುದು ಎಂದು ಹೇಳಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.