ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನ್: ಖಾಸಿಂ ಸುಲೇಮಾನಿ ಸಂಸ್ಮರಣೆ ವೇಳೆ ಅವಳಿ ಬಾಂಬ್ ಸ್ಫೋಟದ ಹೊಣೆ ಹೊತ್ತ ISIS

ಭೀಕರ ಬಾಂಬ್ ದಾಳಿಯಲ್ಲಿ 84 ಜನ ಸಾವು
Published 5 ಜನವರಿ 2024, 12:42 IST
Last Updated 5 ಜನವರಿ 2024, 12:42 IST
ಅಕ್ಷರ ಗಾತ್ರ

ದುಬೈ: ಇರಾನ್‌ ಸೇನಾಧಿಕಾರಿಯಾಗಿದ್ದ ಖಾಸಿಂ ಸುಲೇಮಾನಿ ಸಂಸ್ಮರಣೆಯಲ್ಲಿ ಪಾಲ್ಗೊಂಡಿದ್ದ ಜನರನ್ನು ಗುರಿಯಾಗಿಸಿ ಬುಧವಾರ ಇರಾನ್‌ನ ಕೆರ್ಮಾನ್‌ ನಗರದಲ್ಲಿ ನಡೆದ ಅವಳಿ ಬಾಂಬ್‌ ದಾಳಿಯ ಹೊಣೆಯನ್ನು ಐಎಸ್‌ಐಎಸ್ (ISIS) ಸಂಘಟನೆ ಹೊತ್ತುಕೊಂಡಿದೆ.

ಟೆಲಿಗ್ರಾಂ ಚಾನಲ್‌ನಲ್ಲಿ ಐಸಿಸ್ ವಕ್ತಾರರು ಹೇಳಿಕೆ ಬಿಡುಗಡೆ ಮಾಡಿ ನಮ್ಮ ಇಬ್ಬರು ಆತ್ಮಹತ್ಯಾ ಬಾಂಬರ್‌ಗಳು ಕೆರ್ಮಾನ್‌ ನಗರದಲ್ಲಿ ಅವಳಿ ಬಾಂಬ್ ಸಿಡಿಸಿದ್ದಾರೆ ಎಂದು ತಿಳಿಸಿರುವುದಾಗಿ ಸುದ್ದಿಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ಈ ಭೀಕರ ಅವಳಿ ಬಾಂಬ್ ಸ್ಫೋಟದಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ 84 ಜನ ಮೃತಪಟ್ಟು 382 ಜನ ಗಾಯಗೊಂಡಿದ್ದಾರೆ. ಈ ಮೊದಲು ಸಾವಿನ ಸಂಖ್ಯೆ 100 ಎಂದು ಹೇಳಲಾಗಿತ್ತು.

ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ ಕೋರ್‌ನ ಕಮಾಂಡರ್‌ ಮೇಜರ್‌ ಜನರಲ್‌ ಆಗಿದ್ದ ಖಾಸಿಂ ಸುಲೇಮಾನಿ ಅವರು, 2020ರ ಜನವರಿ 3ರಂದು ಅಮೆರಿಕ ನಡೆಸಿದ್ದ ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟಿದ್ದರು. ಅವರಿಗೆ ಅಭಿಮಾನಿಗಳು ಗೌರವ ಸಲ್ಲಿಸುವ ವೇಳೆ ಇರಾನ್‌ನ ದಕ್ಷಿಣ ಪ್ರಾಂತ್ಯವಾದ ಕೆರ್ಮಾನ್‌ ಸಮಾಧಿ ಸ್ಥಳದಲ್ಲಿ ಬಾಂಬ್ ಸ್ಫೋಟವಾಗಿದ್ದವು.

ಮೃತರ ಪಾರ್ಥಿವ ಶರೀರಗಳನ್ನು ಮೆರವಣಿಗೆ ಮಾಡಿ ಶುಕ್ರವಾರ ಇರಾನ್ ಸೇನಾಡಳಿತ ಸಂಬಂಧಿಕರಿಗೆ ಹಸ್ತಾಂತರಿಸಿತು.

ಈ ಘೋರ ರಕ್ತಪಾತವನ್ನು ನಡೆಸಿದವರನ್ನು ಸುಮ್ಮನೆ ಬಿಡುವುದಿಲ್ಲ. ಪ್ರತೀಕಾರ ತೆಗೆದುಕೊಳ್ಳುತ್ತೇವೆ ಎಂದು ಇರಾನ್ ಸೇನೆ ಹಾಗೂ ನಾಯಕರು ಗುಡುಗಿದ್ದಾರೆ.

1979 ರ ನಂತರ ಇರಾನ್‌ನಲ್ಲಿ ಸಂಭವಿಸಿದ ಅತಿದೊಡ್ಡ ಭಯೋತ್ಪಾದಕ ದಾಳಿ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT