ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನ್ | ಖಾಸಿಂ ಸುಲೇಮಾನಿ ಪುಣ್ಯಸ್ಮರಣೆ ವೇಳೆ ದಾಳಿ: ಆಘಾತ ವ್ಯಕ್ತಪಡಿಸಿದ ಭಾರತ

Published 4 ಜನವರಿ 2024, 12:54 IST
Last Updated 4 ಜನವರಿ 2024, 12:54 IST
ಅಕ್ಷರ ಗಾತ್ರ

ನವದೆಹಲಿ: ಇರಾನ್‌ ಸೇನಾಧಿಕಾರಿಯಾಗಿದ್ದ ಖಾಸಿಂ ಸುಲೇಮಾನಿ ಅವರ ಪುಣ್ಯಸ್ಮರಣೆಯಲ್ಲಿ ಪಾಲ್ಗೊಂಡಿದ್ದ ಜನರನ್ನು ಗುರಿಯಾಗಿರಿಸಿ ಕೆರ್ಮಾನ್‌ ನಗರದಲ್ಲಿ ಬುಧವಾರ ನಡೆದ ಬಾಂಬ್‌ ದಾಳಿ ಬಗ್ಗೆ ಭಾರತ ಆಘಾತ ವ್ಯಕ್ತಪಡಿಸಿದೆ.

ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ ಕೋರ್‌ನ ಕಮಾಂಡರ್‌ ಮೇಜರ್‌ ಜನರಲ್‌ ಆಗಿದ್ದ ಸುಲೇಮಾನಿ ಅವರು, 2020ರ ಜನವರಿ 3ರಂದು ಅಮೆರಿಕ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟಿದ್ದರು. ಅವರಿಗೆ ಗೌರವ ಸಲ್ಲಿಸಲು ಸಮಾಧಿ ಸ್ಥಳದಲ್ಲಿ ನೆರೆದಿದ್ದವರ ಮೇಲೆ ಎರಡು ಸಲ ನಡೆದ ದಾಳಿಯಲ್ಲಿ 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಈ ಕುರಿತು ಎಕ್ಸ್‌ (ಟ್ವಿಟರ್‌) ಖಾತೆಯಲ್ಲಿ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರವೀಂದ್ರ ಜೈಸ್ವಾಲ್‌, 'ಇರಾನ್‌ನ ಕೆರ್ಮಾನ್‌ ನಗರದಲ್ಲಿ ನಡೆದ ಬಾಂಬ್‌ ದಾಳಿಯಿಂದಾಗಿ ಆಘಾತಗೊಂಡಿದ್ದೇವೆ ಮತ್ತು ದುಃಖಿತರಾಗಿದ್ದೇವೆ. ಈ ಸಂಕಷ್ಟದ ಸಮಯದಲ್ಲಿ ಇರಾನ್‌ ಸರ್ಕಾರ ಮತ್ತು ಜನರೊಂದಿಗೆ ನಿಲ್ಲುತ್ತೇವೆ' ಎಂದು ತಿಳಿಸಿದ್ದಾರೆ.

'ದಾಳಿ ವೇಳೆ ಮೃತಪಟ್ಟವರು ಮತ್ತು ಗಾಯಾಳುಗಳ ಕುಟುಂಬದವರಿಗಾಗಿ ಪ್ರಾರ್ಥಿಸುತ್ತೇವೆ' ಎಂದೂ ಹೇಳಿದ್ದಾರೆ

ಇನಾನ್‌ ವಿದೇಶಾಂಗ ಸಚಿವ ಹೊಸೈನ್‌ ಅಮಿರಬ್ಡೊಲ್ಲಾಹೈನ್‌ ಅವರು, ಉಗ್ರ ದಾಳಿಯ ವಿರುದ್ಧ 'ಕಾನೂನಾನ್ಮಕ ಮತ್ತು ಅಂತರರಾಷ್ಟ್ರೀಯ ಕ್ರಮ' ಕೈಗೊಳ್ಳುತ್ತೇವೆ ಎಂದು ಗುಡುಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT