ಜೆರುಸಲೇಮ್: ವೆಸ್ಟ್‌ಬ್ಯಾಂಕ್‌ನಲ್ಲಿ ಪ್ರತಿಭಟನೆ ನಡೆಸುವ ವೇಳೆ ಕಲ್ಲು ತೂರಾಟದಲ್ಲಿ ತೊಡಗಿದ್ದ ಪ್ಯಾಲೆಸ್ಟೀನರ ಮೇಲೆ ಇಸ್ರೇಲ್ ಪಡೆಗಳು ಶನಿವಾರ ಗುಂಡಿನ ದಾಳಿ ನಡೆಸಿದವು. ಈ ಘಟನೆಯಲ್ಲಿ 16 ವರ್ಷದ ಪ್ಯಾಲೆಸ್ಟೀನಿ ಬಾಲಕ ಮೃತಪಟ್ಟಿದ್ಧಾನೆ ಎಂದು ಇಸ್ರೇಲ್ ಹಾಗೂ ಪ್ಯಾಲೆಸ್ಟೀನ್ ಅಧಿಕಾರಿಗಳು ಹೇಳಿದ್ದಾರೆ.

‘ರಮಲ್ಲಾದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೊಹಮ್ಮದ್ ಅಬ್ದಲ್ಲಾ ಹಮೇದ್ ಎಂಬ ಬಾಲಕಗೊಂಡಿದ್ದ. ನಂತರ, ಆತನನ್ನು ಇಸ್ರೇಲ್ ಪಡೆಗಳು ತಮ್ಮ ವಶಕ್ಕೆ ಪಡೆದವು. ಬಾಲಕ, ಇಸ್ರೇಲ್ ಪಡೆಗಳ ವಶದಲ್ಲಿದ್ದಾಗ ಮೃತಪಟ್ಟಿದ್ದಾನೆ’ ಎಂದು ಪ್ಯಾಲಿಸ್ಟೀನ್ ಸುದ್ದಿಸಂಸ್ಥೆ ವಫಾ ತಿಳಿಸಿದೆ.

‘ಕಲ್ಲು ತೂರಾಟದಲ್ಲಿ ತೊಡಗಿದ್ದವರತ್ತ ಸೈನಿಕರು ಗುಂಡು ಹಾರಿಸಿದ್ದಾರೆ. ಈ ವೇಳೆ ಒಬ್ಬ ವ್ಯಕ್ತಿಗೆ ಗಾಯಗಳಾಗಿವೆ’ ಎಂದು ಒಪ್ಪಿಕೊಂಡಿರುವ ಇಸ್ರೇಲ್ ಪಡೆಗಳು, ಗಾಯಾಳುವಿನ ಸ್ಥಿತಿ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.