ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಜಾದ ಮೇಲೆ ಇಸ್ರೇಲ್‌ ಪಡೆಗಳ ವೈಮಾನಿಕ ದಾಳಿ: 165 ಪ್ಯಾಲೆಸ್ಟೀನಿಯರ ಹತ್ಯೆ

Published 30 ಡಿಸೆಂಬರ್ 2023, 14:24 IST
Last Updated 30 ಡಿಸೆಂಬರ್ 2023, 14:24 IST
ಅಕ್ಷರ ಗಾತ್ರ

ಗಾಜಾ ಪಟ್ಟಿ: ಕೇಂದ್ರ ಗಾಜಾದ ಮೇಲೆ 24 ಗಂಟೆಗಳ ಅವಧಿಯಲ್ಲಿ ಇಸ್ರೇಲ್‌ ಪಡೆಗಳು ನಡೆಸಿರುವ ವೈಮಾನಿಕ ದಾಳಿಯಲ್ಲಿ 165 ಮಂದಿ ಪ್ಯಾಲೆಸ್ಟೀನಿಯರು ವೃತಪಟ್ಟಿದ್ದು, 250 ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.

ಕೇಂದ್ರ ಗಾಜಾದ ನುಸಿರಾತ್ ಮತ್ತು ಬುರೇಜ್ ನಗರಗಳ ನಿರಾಶ್ರಿತರ ಶಿಬಿರಗಳ ಮೇಲೆ ಇಸ್ರೇಲ್ ಪಡೆಗಳು ವಾಯು ದಾಳಿ ತೀವ್ರಗೊಳಿಸಿದ್ದು, ನಾಗರಿಕರ ಸಾವು–ನೋವಿನ ಬಗ್ಗೆ ಜಾಗತಿಕ ಮಟ್ಟದಲ್ಲಿ ಕಳವಳ ವ್ಯಕ್ತವಾಗಿದೆ.

ಈ ನಡುವೆಯೇ ಅಮೆರಿಕದ ಜೋ ಬೈಡನ್‌ ಆಡಳಿತವು ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಲು ಅನುಮೋದನೆ ನೀಡಿದೆ.

ಪ್ಯಾಲೆಸ್ಟೀನ್‌ ಸಮಾಜದಲ್ಲಿ ಆಳವಾಗಿ ಬೇರುಬಿಟ್ಟಿರುವ ಹಮಾಸ್‌ ಬಂಡುಕೋರರನ್ನು ಪೂರ್ಣವಾಗಿ ಸದೆಬಡಿಯುವವರೆಗೂ ವೈಮಾನಿಕ ಮತ್ತು ಭೂದಾಳಿಯನ್ನು ದಾಳಿಯನ್ನು ಮುಂದುವರಿಸುವುದಾಗಿ ಇಸ್ರೇಲ್‌ ಹೇಳಿದೆ.

ಇಸ್ರೇಲ್‌ಗೆ ರಾಜತಾಂತ್ರಿಕವಾಗಿ ರಕ್ಷಣೆ ನೀಡುತ್ತಿರುವ ಅಮೆರಿಕ, ಶಸ್ತ್ರಾಸ್ತ್ರಗಳ ಮಾರಾಟವನ್ನು ಮುಂದುವರಿಸಿದೆ ಎಂದು ಮೂಲಗಳು ಹೇಳಿವೆ. ಈಗ ಯುದ್ಧ ನಿಲ್ಲಿಸಿದರೆ ಅದು ಹಮಾಸ್‌ ಬಂಡುಕೋರರಿಗೆ ಜಯ ಸಿಕ್ಕಂತೆ ಎಂದು ಇಸ್ರೇಲ್‌ ಹೇಳಿದೆ.

ನುಸಿರಾತ್‌ನಲ್ಲಿ ಪತ್ರಕರ್ತ ಜಾಬರ್ ಅಬು ಹದ್ರಾಜ್ ಎಂಬವರ ಮನೆಯನ್ನು ಗುರಿಯಾಗಿಸಿ ಇಸ್ರೇಲ್‌ ಪಡೆಗಳು ಶುಕ್ರವಾರ ವಾಯು ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಜಾಬರ್ ಅಬು ಮತ್ತು ಅವರ ಕುಟುಂಬದ ಆರು ಮಂದಿ ಸದಸ್ಯರು ಮೃತಪಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT