ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೇಲ್‌ಗೆ ಬೆಂಬಲ: ನೀಲಿ ಬಣ್ಣದಿಂದ ಕಂಗೊಳಿಸಿದ ಬ್ರಿಟನ್ ಸಂಸತ್, ಐಫೆಲ್ ಟವರ್‌

Published 11 ಅಕ್ಟೋಬರ್ 2023, 2:19 IST
Last Updated 11 ಅಕ್ಟೋಬರ್ 2023, 2:19 IST
ಅಕ್ಷರ ಗಾತ್ರ

ಪ್ಯಾರಿಸ್: ಇಸ್ರೇಲ್‌ ಮೇಲೆ ಪ್ಯಾಲೆಸ್ಟೀನ್‌ ಹಮಾಸ್ ಬಂಡುಕೋರರು ನಡೆಸಿದ ದಾಳಿಯನ್ನು ಹಲವು ದೇಶಗಳು ಖಂಡಿಸಿವೆ.

‘ತಕ್ಷಣ ಹಿಂಸಾಚಾರ ನಿಲ್ಲಿಸಿ, ಶಾಂತಿ ಸ್ಥಾಪನೆಗೆ ಮುಂದಾಗಬೇಕು ಹಾಗೂ ‌ಒತ್ತೆಯಾಳುಗಳನ್ನು ಕೂಡಲೇ ಬಿಡುಗಡೆ ಮಾಡಬೇಕು’ ಎಂದು ಭಾರತ, ಅಮೆರಿಕ, ರಷ್ಯಾ, ಬ್ರಿಟನ್, ಜರ್ಮನಿ, ಸ್ಪೇನ್, ಉಕ್ರೇನ್, ಟರ್ಕಿ ಸೇರಿದಂತೆ ಹಲವು ದೇಶಗಳು ಆಗ್ರಹಿಸಿವೆ.

‘ಹಮಾಸ್ ಬಂಡುಕೋರರು ನಡೆಸಿದ ಅಪ್ರಚೋದಿತ ದಾಳಿಯನ್ನು ಖಂಡಿಸಲಾಗುವುದು. ಇಸ್ರೇಲ್ ಸರ್ಕಾರ ಮತ್ತು ಜನರೊಂದಿಗೆ ದೃಢವಾಗಿ ನಿಲ್ಲುತ್ತೇವೆ’ ಎಂದು ಶ್ವೇತಭವನದ ಹೇಳಿಕೆ ತಿಳಿಸಿದೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಪ್ಯಾರಿಸ್‌ನಲ್ಲಿರುವ ಐಫೆಲ್ ಟವರ್ ಮೇಲೆ ನೀಲಿ –ಬಿಳಿ ಬಣ್ಣದೊಂದಿಗೆ ಇಸ್ರೇಲ್ ಧ್ವಜವನ್ನು ಮೂಡಿಸುವ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸಲಾಗಿದೆ. ಜತೆಗೆ ಇಸ್ರೇಲ್ ರಾಷ್ಟ್ರಗೀತೆಯನ್ನೂ ನುಡಿಸಲಾಗಿದೆ. ಇದರ ವಿಡಿಯೊ ಮತ್ತು ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿಡಾಡುತ್ತಿವೆ.

ನ್ಯೂಯಾರ್ಕ್ ನಗರದಲ್ಲಿನ ಎಂಪೈರ್ ಸ್ಟೇಟ್ ಕಟ್ಟಡ, ಬ್ರಿಟನ್‌ ಸಂಸತ್ ಕಟ್ಟಡ, ಲಂಡನ್‌ನ 10 ಡೌನಿಂಗ್ ಸ್ಟ್ರೀಟ್‌ನಲ್ಲಿರುವ ಸಿಡ್ನಿ ಒಪೇರಾ ಹೌಸ್ ಮತ್ತು ಜರ್ಮನಿಯ ಬ್ರಾಂಡೆನ್‌ಬರ್ಗ್ ಗೇಟ್‌ನಂತಹ ಐತಿಹಾಸಿಕ ಕಟ್ಟಡಗಳ ಮೇಲೆ ಇಸ್ರೇಲ್ ಧ್ವಜ (ನೀಲಿ– ಬಿಳಿ ಬಣ್ಣ) ಮೂಡಿಸುವ ಮೂಲಕ ಸಂಘರ್ಷ ಪೀಡಿತ ಇಸ್ರೇಲ್‌ಗೆ ಬೆಂಬಲ ಸೂಚಿಸಲಾಗಿದೆ.

ಹಮಾಸ್ ನಡೆಸಿದ ದಾಳಿಯಲ್ಲಿ ಇಸ್ರೇಲ್‌ನಲ್ಲಿ ಸಾವನ್ನಪ್ಪಿರುವ ಜನರ ಸಂಖ್ಯೆಯು 900ಕ್ಕಿಂತ ಹೆಚ್ಚಾಗಿದೆ. ಗಾಜಾದಲ್ಲಿ ಇದುವರೆಗೆ 687 ಜನ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಗಾಜಾ ಪಟ್ಟಿಯ ಪೂರ್ವ ಗಡಿಯ ಬಳಿ ಒಂದೇ ಸ್ಥಳದಲ್ಲಿ ಹಮಾಸ್ ಬಂಡುಕೋರರು 100ಕ್ಕೂ ಹೆಚ್ಚು ಮಂದಿಯನ್ನು ಕೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT