ಜೆರುಸಲೇಂ; ಬೆಂಗಳೂರು ಮತ್ತು ಟೆಲ್ ಅವೀವ್ ನಡುವೆ ವಿಮಾನ ಸಂಪರ್ಕ ಹೊಂದಲು ಇಸ್ರೇಲ್ ಉತ್ಸುಕವಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದರು.

‘ಇದು ಕೇವಲ ಆರು ಗಂಟೆಗಳ ಪ್ರಯಾಣವಾಗಲಿದೆ’ ಎಂದು ಅವರು ಭಾರತದ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು. ‘ಶೀಘ್ರದಲ್ಲಿಯೇ ಭಾರತಕ್ಕೆ ಭೇಟಿ ನೀಡಲು ನಾನು ಬಯಸುತ್ತೇನೆ’ ಎಂದೂ ಅವರು ತಿಳಿಸಿದರು.

ಭಾರತ– ಅಮೆರಿಕ ದೇಶಗಳು ಸುಂಕ ಸಮಸ್ಯೆಯನ್ನು ಪರಿಹರಿಸಲು ಸಾಮಾನ್ಯ ನೆಲೆಯನ್ನು ಕಂಡುಕೊಳ್ಳಬೇಕು ಎಂದು ಅವರು ಪ್ರತಿಕ್ರಿಯಿಸಿದರು.

‘ಗಾಜಾವನ್ನು ವಶಪಡಿಸಿಕೊಳ್ಳಲು ಇಸ್ರೇಲ್ ಬಯಸುವುದಿಲ್ಲ. ಹಮಾಸ್ ಅನ್ನು ನಾಶಪಡಿಸುವುದು ನಮ್ಮ ಏಕೈಕ ಗುರಿ. ಬಳಿಕ ಗಾಜಾಪಟ್ಟಿಯನ್ನು ತಾತ್ಕಾಲಿಕ ಸರ್ಕಾರಕ್ಕೆ ಹಸ್ತಾಂತರಿಸುತ್ತೇವೆ. ಈ ಯುದ್ಧವನ್ನು ಆದಷ್ಟು ಬೇಗ ಅಂತ್ಯಗೊಳಿಸುತ್ತೇವೆ’ ಎಂದು ಅವರು ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.