ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿರಿಯಾ ಮೇಲೆ ಇಸ್ರೇಲ್‌ ದಾಳಿ: 14 ಮಂದಿ ಸಾವು

Published : 9 ಸೆಪ್ಟೆಂಬರ್ 2024, 11:45 IST
Last Updated : 9 ಸೆಪ್ಟೆಂಬರ್ 2024, 11:45 IST
ಫಾಲೋ ಮಾಡಿ
Comments

ಡಮಾಸ್ಕಸ್: ಸಿರಿಯಾ ಮೇಲೆ ಇಸ್ರೇಲ್‌ ಭಾನುವಾರ ರಾತ್ರಿ ನಡೆಸಿದ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸಿರಿಯಾದ ಸುದ್ದಿಸಂಸ್ಥೆ ‘ಸನಾ’ (ಎಸ್‌ಎಎನ್‌ಎ) ಸೋಮವಾರ ವರದಿ ಮಾಡಿದೆ.

ಕೇಂದ್ರ ಸಿರಿಯಾದ ಮೇಲೆ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಹಲವು ಪ್ರದೇಶಗಳು ಹಾನಿಗೊಳಗಾಗಿವೆ. ಹಮಾ ಪ್ರಾಂತ್ಯದ ಹೆದ್ದಾರಿಗೆ ಸಾಕಷ್ಟು ಹಾನಿಯಾಗಿದೆ ಎಂದು ತಿಳಿಸಿದೆ.

‘ಮೃತರಲ್ಲಿ ಕನಿಷ್ಠ ನಾಲ್ವರು ಸೇನೆಗೆ ಸೇರಿದವರಲ್ಲ. ಮಯಸಾಫ್‌ನಲ್ಲಿರುವ ವೈಜ್ಞಾನಿಕ ಸಂಶೋಧನಾ ಕೇಂದ್ರ ಮತ್ತು ಇರಾನ್ ಭಯೋತ್ಪಾದಕರು ಹಾಗೂ ತಜ್ಞರು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುತ್ತಿದ್ದ ಪ್ರದೇಶಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ’ ಎಂದು ಸಿರಿಯಾದಲ್ಲಿನ ಬ್ರಿಟನ್ ಮೂಲದ ಮಾನವ ಹಕ್ಕು ಕಣ್ಗಾವಲು ಸಂಸ್ಥೆ ತಿಳಿಸಿದೆ.

 ಈ ಬಗ್ಗೆ ಇಸ್ರೇಲ್‌ ಸೇನೆಯು ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT