ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಾಜಾದಲ್ಲಿ ವಾಸ್ತವ್ಯಕ್ಕೆ ಸ್ಥಳದ ಕೊರತೆ

Published 6 ಫೆಬ್ರುವರಿ 2024, 13:06 IST
Last Updated 6 ಫೆಬ್ರುವರಿ 2024, 13:06 IST
ಅಕ್ಷರ ಗಾತ್ರ

ಜೆರುಸಲೇಂ: ಗಾಜಾ ಪಟ್ಟಿಯ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 50ರಷ್ಟಕ್ಕಿಂತ ಹೆಚ್ಚಿನವರು ಈಗ ರಫಾ ನಗರದಲ್ಲಿ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಿಕ್ಕಿರಿದ ರೀತಿಯಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವೀಯ ನೆರವುಗಳ ಸಮನ್ವಯ ಕಚೇರಿ ತಿಳಿಸಿದೆ. ರಫಾ ನಗರವು ಈಜಿಪ್ಟ್‌ ಗಡಿಗೆ ಹೊಂದಿಕೊಂಡಂತೆ ಇದೆ.

ಗಾಜಾ ಪಟ್ಟಿಯ ಒಟ್ಟು ಜನಸಂಖ್ಯೆ 23 ಲಕ್ಷ. ಗಾಜಾ ಪಟ್ಟಿಯ ಹಲವು ಪ್ರದೇಶಗಳಿಗೆ ಅನ್ವಯವಾಗುವಂತೆ ಇಸ್ರೇಲ್ ‘ತೆರವು’ ಆದೇಶ ಹೊರಡಿಸಿದೆ. ಇದು ಈಗ ಗಾಜಾ ಪಟ್ಟಿಯ ಮೂರನೆಯ ಎರಡರಷ್ಟು ಭಾಗಕ್ಕೆ, ಅಂದರೆ 246 ಚದರ ಕಿ.ಮೀ. ಪ್ರದೇಶಕ್ಕೆ ಅನ್ವಯವಾಗುತ್ತಿದೆ. 

ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಆರಂಭವಾದ ನಂತರದಲ್ಲಿ ಮೃತಪಟ್ಟ ಪ್ಯಾಲೆಸ್ಟೀನ್ ಪ್ರಜೆಗಳ ಸಂಖ್ಯೆ 27,478 ಎಂದು ಗಾಜಾದಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ. ಗಾಜಾದ ಒಟ್ಟು ಜನಸಂಖ್ಯೆಯಲ್ಲಿ ಕಾಲುಭಾಗದಷ್ಟು ಜನ ಹಸಿವಿನ ದವಡೆಗೆ ಸಿಲುಕಿದ್ದಾರೆ, ಶೇಕಡ 85ರಷ್ಟು ಮಂದಿ ಮನೆಗಳಿಂದ ಹೊರಬಿದ್ದಿದ್ದಾರೆ, ಅಗತ್ಯ ಪ್ರಮಾಣದಲ್ಲಿ ಸ್ಥಳಾವಕಾಶ ಇಲ್ಲದಿದ್ದರೂ ನೂರಾರು ಮಂದಿ ತಾತ್ಕಾಲಿಕ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.

ಸೌದಿ ಅರೇಬಿಯಾಕ್ಕೆ ಸೋಮವಾರ ಬಂದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಅವರು ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು ಭೇಟಿ ಮಾಡಿದರು. ಅಕ್ಟೋಬರ್‌ನಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ಶುರುವಾದ ನಂತರದಲ್ಲಿ ಬ್ಲಿಂಕನ್ ಅವರು ಮಧ್ಯಪ್ರಾಚ್ಯಕ್ಕೆ ಭೇಟಿ ನೀಡಿರುವುದು ಇದು ಐದನೆಯ ಬಾರಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT