ವಾಷಿಂಗ್ಟನ್: ‘ನಾವು ಕೆಲಸ ಮಾಡಲು ಸಿದ್ಧರಿದ್ದೇವೆ. ಮಾಡುವುದಕ್ಕೆ ಸಾಕಷ್ಟು ಕೆಲಸವಿದೆ. ನಮ್ಮ ನೂತನ ಆಡಳಿತದ ಎದುರು ಸಾಕಷ್ಟು ಸವಾಲುಗಳಿರುವುದನ್ನು ಒಪ್ಪಿಕೊಂಡಿದ್ದೇವೆ. ಆದರೆ ಅವುಗಳನ್ನು ಎದುರಿಸಿ ಗೆಲ್ಲುವುದು ಅಷ್ಟು ಸುಲಭವಲ್ಲ‘ ಎಂದು ಅಮೆರಿಕದ ಚುನಾಯಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೇಳಿದ್ದಾರೆ.

ಇಲ್ಲಿನ ಅನಕೊಸ್ಟಿಯಾದಲ್ಲಿ ನಡೆದ ರಾಷ್ಟ್ರೀಯ ಸೇವಾ ದಿವಸ ಸಮಾರಂಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನೂತನ ಆಡಳಿತ ಆರಂಭವಾದ ನಂತರ ಯಾವ ಯಾವ ಕೆಲಸಗಳಿಗೆ ಆದ್ಯತೆ ನೀಡಬೇಕೆಂದು ಬೈಡನ್ ಪಟ್ಟಿ ಮಾಡಿದ್ದಾರೆ. ಅದರಂತೆ ಕಾರ್ಯನಿರ್ವಹಿಸುತ್ತೇವೆ‘ ಎಂದರು.

‘ಪ್ರಮುಖವಾಗಿ ಕೊರೊನಾ ಲಸಿಕೆ ವಿತರಣೆಗೆ ಯೋಜನೆ ರೂಪಿಸುವುದು, ಕೊರೊನಾ ಸೋಂಕಿನಿಂದ ನೊಂದಿರುವ ನೌಕರ ವರ್ಗದವರಿಗೆ ಮತ್ತು ಕುಟುಂಬಗಳಿಗೆ ಪರಿಹಾರ ನೀಡುವುದು.. ಇತ್ಯಾದಿ ಕೆಲಸಗಳು ಆದ್ಯತೆಯ ಪಟ್ಟಿಯಲ್ಲಿವೆ. ಇವು ಕೇವಲ ಕೆಲಸಗಳಷ್ಟೇ ಅಲ್ಲ, ನಮ್ಮ ಮಹಾತ್ಮಾಕಾಂಕ್ಷೆಯ ಗುರಿ ಕೂಡ. ಈ ಗುರಿ ತಲುಪುವುದಕ್ಕಾಗಿ ಕಠಿಣವಾಗಿ ಕೆಲಸ ಮಾಡಬೇಕು. ಇದಕ್ಕೆ ಅಮೆರಿಕದ ಕಾಂಗ್ರೆಸ್ ಸದಸ್ಯರ ಸಹಕಾರವೂ ಅಗತ್ಯ‘ ಎಂದು ಕಮಲಾ ಅವರು ಸುದ್ದಿಗಾರರ ಪ್ರಶ್ನೆಯೊದಕ್ಕೆ ಉತ್ತರಿಸಿದ್ದಾರೆ.

‘ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಹೋಗುವುದು ಸುರಕ್ಷಿತ ಎಂದು ಅನಿಸಿದೆಯೇ‘ ಎಂಬ ಪ್ರಶ್ನೆಗೆ ಉತ್ತರಿಸಿದ ಕಮಲಾ, ‘ಅಮೆರಿಕದ ನೂತನ ಉಪಾಧ್ಯಕ್ಷೆಯಾಗಿ ಪ್ರಮಾಣವಚನ ಸ್ವೀಕರಿಸಲು ನಾನು ಎದುರು ನೋಡುತ್ತಿದ್ದೇನೆ. ಕಾರ್ಯಕ್ರಮದಲ್ಲಿ ಹೆಮ್ಮೆಯಿಂದ ಭಾಗವಹಿಸುತ್ತೇನೆ‘ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.