ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಪಾನ್‌ ಕಡೆಗೆ ಉತ್ತರ ಕೊರಿಯಾ ಕ್ಷಿಪಣಿ ಉಡಾವಣೆ: ನಾಗರಿಕರಿಗೆ ಎಚ್ಚರಿಕೆ

Last Updated 4 ಅಕ್ಟೋಬರ್ 2022, 7:54 IST
ಅಕ್ಷರ ಗಾತ್ರ

ಟೊಕಿಯೊ: ಐದು ವರ್ಷಗಳಲ್ಲಿಇದೇ ಮೊದಲ ಬಾರಿಗೆ ಉತ್ತರ ಕೊರಿಯಾ ಮಂಗಳವಾರ ಜಪಾನ್ಕಡೆಗೆಖಂಡಾಂತರಕ್ಷಿಪಣಿ ಉಡಾಯಿಸಿದೆ ಎಂದು ದಕ್ಷಿಣ ಕೊರಿಯಾದ ಮಿಲಿಟರಿ ಹೇಳಿದೆ. ಈ ಹಿನ್ನೆಲೆಯಲ್ಲಿ, ಸುರಕ್ಷಿತ ತಾಣಗಳಲ್ಲಿ ಆಶ್ರಯ ಪಡೆಯುವಂತೆ ತನ್ನ ಉತ್ತರ ಪ್ರಾಂತ್ಯದ ನಾಗರಿಕರಿಗೆ ಜಪಾನ್‌ ಎಚ್ಚರಿಕೆ ನೀಡಿದೆ.

ಈ ಉಡಾವಣೆಯ ಮೂಲಕಉತ್ತರ ಕೊರಿಯಾದ ಮಿಲಿಟರಿ ಶಸ್ತ್ರಾಸ್ತ್ರ ಬಲವರ್ಧನೆ ಪ್ರಯತ್ನಗಳು ಮತ್ತೊಮ್ಮೆ ಬಹಿರಂಗವಾಗಿದೆ. ಇತ್ತೀಚಿನ ದಿನಗಳಲ್ಲಿಅಮೆರಿಕಮತ್ತು ಅದರ ಮಿತ್ರರಾಷ್ಟ್ರಗಳು ಈ ಪ್ರದೇಶದಲ್ಲಿಸಮರಾಭ್ಯಾಸ ನಡೆಸಿದ್ದವು. ಅದಾದ ಬಳಿಕ ಉತ್ತರ ಕೊರಿಯನಾಲ್ಕನೇ ಬಾರಿಗೆ ಕ್ಷಿಪಣಿ ಉಡಾವಣೆ ಮಾಡಿದೆ.

ಕ್ಷಿಪಣಿಯು ಜಪಾನ್‌ನ ಮೂಲಕ ಪೆಸಿಫಿಕ್‌ ಮಹಾಸಾಗರದ ಕಡೆಗೆ ಉಡಾವಣೆಗೊಂಡಿದೆ. ಬೆಳಿಗ್ಗೆ 7:22ರ ಸುಮಾರಿನಲ್ಲಿ ಕ್ಷಿಪಣಿ ಜಪಾನ್‌ ಹಾದು, 17 ನಿಮಿಷಗಳ ನಂತರ ಸಾಗರದಲ್ಲಿ ಪತನಗೊಂಡಿದೆ. ಕ್ಷಿಪಣಿಯುನಮ್ಮ ವಿಶೇಷ ಆರ್ಥಿಕ ವಲಯದ ಹೊರಗೆ ಪತನಗೊಂಡಿದೆ ಎಂದುಜಪಾನ್‌ನ ರಕ್ಷಣಾ ಸಚಿವಾಲಯ ಹೇಳಿದೆ.

ಉತ್ತರ ಕೊರಿಯಾ ಈ ವರ್ಷ 23 ಖಂಡಾಂತರಮತ್ತು ಇತರ ಕ್ಷಿಪಣಿಗಳನ್ನು ಉಡಾಯಿಸಿದೆ. ಈ ಪೈಕಿ ನಾಲ್ಕು ಕ್ಷಿಪಣಿಗಳನ್ನು ಈ ಒಂದು ವಾರದಲ್ಲೇ ಉಡಾವಣೆ ಮಾಡಿದೆ.

ಅಮೋರಿ, ಹೊಕ್ಕೈಡೊ ಮತ್ತು ಟೊಕಿಯೊ ಸುತ್ತಲ ದ್ವೀಪಗಳಲ್ಲಿನ ನಾಗರಿಕರು ಸುರಕ್ಷಿತತಾಣಗಳಲ್ಲಿ ಆಶ್ರಯ ಪಡೆಯಬೇಕು ಎಂದು ಜಪಾನ್‌ ಎಚ್ಚರಿಕೆ ನೀಡಿತ್ತು ಎಂದು 'ನ್ಯೂಯಾರ್ಕ್‌ ಟೈಮ್ಸ್‌' ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT