ಮುಂಬೈ: ಹಿಂದಿಯ ಜನಪ್ರಿಯ ‘ಕಪಿಲ್ ಶರ್ಮಾ ಶೋ’ಮೂಲಕ ಖ್ಯಾತರಾಗಿರುವ ಕಾಮಿಡಿಯನ್ ಕಪಿಲ್ ಶರ್ಮಾ ಅವರ ಕೆನಡಾದಲ್ಲಿರುವ ಕೆಫೆ ಮೇಲೆ ಗುಂಡಿನ ದಾಳಿ ನಡೆದಿದೆ. ಒಂಬತ್ತು ಸುತ್ತು ಗುಂಡು ಹಾರಿಸಲಾಗಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.

ದಾಳಿಯ ಹೊಣೆಯನ್ನು ಖಾಲಿಸ್ತಾನಿ ಉಗ್ರ ಹರ್ಜೀತ್ ಸಿಂಗ್ ಲಡ್ಡಿ ಹೊತ್ತುಕೊಂಡಿದ್ದಾನೆ. ಘಟನೆಯಲ್ಲಿ ಯಾರೊಬ್ಬರಿಗೂ ಗಾಯಗಳಾಗಿಲ್ಲ.

ಕೆನಡಾದ ಸರ್ರೆ ನಗರದಲ್ಲಿ ಕೆಲವೇ ದಿನಗಳ ಹಿಂದೆ ಆರಂಭಗೊಂಡಿದ್ದ ಈ ಕೆಫೆಗೆ ‘ಕ್ಯಾಪ್ಸ್ ಕೆಫೆ’ಎಂದು ಹೆಸರಿಡಲಾಗಿದ್ದು, ರೆಸ್ಟೋರೆಂಟ್ ಉದ್ಯಮಕ್ಕೆ ಕಾಲಿಟ್ಟಿರುವ ಕಪಿಲ್ ಶರ್ಮಾ ಅವರ ಮೊದಲ ಕೆಫೆ ಇದಾಗಿದೆ. ಪತ್ನಿ ಗಿನ್ನಿ ಚತ್ರತ್ ಸಹ ಈ ಕೆಫೆಯ ಸಹ ಮಾಲೀಕರಾಗಿದ್ದಾರೆ.

ಕಾರಿನಲ್ಲಿ ಕುಳಿತ ವ್ಯಕ್ತಿಯೊಬ್ಬ ಕೆಫೆ ಮೇಲೆ 9 ಬಾರಿ ಗುಂಡು ಹಾರಿಸಿರುವುದು ವಿಡಿಯೊದಲ್ಲಿ ಕಂಡುಬಂದಿದೆ.

ಖಾಲಿಸ್ತಾನಿ ಉಗ್ರ ಲಡ್ಡಿ, ರಾಷ್ಟ್ರೀಯ ತನಿಖಾ ಸಂಸ್ಥೆಯ(ಎನ್ಐಎ) ಮೋಸ್ಟ್ ವಾಂಟೇಡ್ ಪಟ್ಟಿಯಲ್ಲಿದ್ದಾನೆ. ಬಬ್ಬರ್ ಕಲಾಸಾ ಇಂಟರ್ನ್ಯಾಶನಲ್ ಸಂಘಟನೆ ಜೊತೆಗೂ ಈತ ಸಂಬಂಧ ಹೊಂದಿದ್ದಾನೆ. ಈ ಹಿಂದೆ ಕಪಿಲ್ ಶರ್ಮಾ ನೀಡಿದ್ದ ಹೇಳಿಕೆಯಿಂದ ಕೋಪಗೊಂಡು ಲಡ್ಡಿ ಈ ದಾಳಿ ನಡೆಸಿದ್ದಾನೆ ಎಂದು ವರದಿ ತಿಳಿಸಿದೆ. ಕೆನಡಾ ಪೊಲೀಸರು ಸ್ಥಳಕ್ಕೆ ತೆರಳಿದ್ದು, ತನಿಖೆ ನಡೆಸುತ್ತಿದ್ದಾರೆ.

ಭಾರತದ ವಿರುದ್ಧ ವಿಧ್ವಂಸಕ ಕೃತ್ಯ ನಡೆಸಲು ಖಾಲಿಸ್ತಾನಿ ಉಗ್ರರು ಸಂಚು ರೂಪಿಸಿದ್ದಾರೆ ಎಂದು ಕಳೆದ ತಿಂಗಳು ಕೆನಡಾ ಗುಪ್ತಚರ ಸಂಸ್ಥೆ ಮಾಹಿತಿ ನೀಡಿತ್ತು.

ಖಾಲಿಸ್ತಾನಿ ಉಗ್ರಗಾಮಿಗಳು ಭಾರತದಲ್ಲಿ ಹಿಂಸಾಚಾರವನ್ನು ಉತ್ತೇಜಿಸಲು, ನಿಧಿಸಂಗ್ರಹಣೆ ಅಥವಾ ಯೋಜನೆಗೆ ಕೆನಡಾವನ್ನು ನೆಲೆಯಾಗಿ ಬಳಸುತ್ತಲೇ ಇದ್ದಾರೆ ಎಂದು ಸಂಸ್ಥೆ ಹೇಳಿತ್ತು.

ಹಲವು ವರ್ಷಗಳಿಂದ, ಕೆನಡಾದಲ್ಲಿ ಸಕ್ರಿಯವಾಗಿರುವ ಖಾಲಿಸ್ತಾನಿ ಭಯೋತ್ಪಾದಕರ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸುತ್ತಿದೆ. ನಮ್ಮ ದೊಡ್ಡ ಸಮಸ್ಯೆ ಕೆನಡಾದಲ್ಲಿದೆ. ಏಕೆಂದರೆ, ಕೆನಡಾದಲ್ಲಿ ಅಧಿಕಾರದಲ್ಲಿರುವ ಪಕ್ಷ ಮತ್ತು ಇತರ ಪಕ್ಷಗಳು ಈ ರೀತಿಯ ಉಗ್ರವಾದ, ಪ್ರತ್ಯೇಕತಾವಾದ ಮತ್ತು ಹಿಂಸಾಚಾರದ ಪ್ರತಿಪಾದಕರಿಗೆ ಸ್ವಾತಂತ್ರ್ಯದ ಹೆಸರಿನಲ್ಲಿ ನಿರ್ದಿಷ್ಟ ಕಾನೂನು ರಕ್ಷಣೆ ನೀಡಿವೆ ಎಂದು ಕಳೆದ ವರ್ಷ ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.