ಕರಾಚಿ: ಉದ್ರಿಕ್ತ ಗುಂಪೊಂದು ಕರಾಚಿಯ ಅಹ್ಮದಿ ಮುಸಲ್ಮಾನರ ಧಾರ್ಮಿಕ ಕೇಂದ್ರದ ಮೇಲೆ ದಾಳಿ ಮಾಡಿದೆ. ಪರಿಣಾಮವಾಗಿ ಅಹ್ಮದಿ ಮುಸಲ್ಮಾನ ಸಮುದಾಯದ ಒಬ್ಬ ವ್ಯಕ್ತಿ ಮೃತಪಟ್ಟು ಹಲವು ಜನ ಗಾಯಗೊಂಡಿದ್ದಾರೆ.

ಕರಾಚಿಯ ಹೊರವಲಯದ ಸಫ್ದಾರ್ ಎಂಬಲ್ಲಿನ ಅಹ್ಮದಿ ಮುಸಲ್ಮಾನರ ಧಾರ್ಮಿಕ ಕೇಂದ್ರದ ಮೇಲೆ ಸುಮಾರು 200 ಜನರಿಂದ ಈ ದಾಳಿ ನಡೆದಿದೆ ಎಂದು ಅಹ್ಮದಿ ಸಮುದಾಯದ ಮುಖಂಡ ಸುದ್ದಿಸಂಸ್ಥೆ ರಾಯಿಟರ್ಸ್ಗೆ ತಿಳಿಸಿರುವುದಾಗಿ ವರದಿಯಾಗಿದೆ.

ಧಾರ್ಮಿಕ ಕೇಂದ್ರದಲ್ಲಿ ಇನ್ನೂ 30 ಜನ ಸಿಲುಕಿದ್ದಾರೆ. ಕೇಂದ್ರವನ್ನು ಧ್ವಂಸ ಮಾಡುವುದು ಉದ್ರಿಕ್ತರ ಗುರಿಯಾಗಿರಬಹುದು. ಅಡ್ಡಿಪಡಿಸಿದವರ ಮೇಲೆ ಅವರು ಮಾರಣಾಂತಿಕ ದಾಳಿ ಮಾಡಿದ್ದಾರೆ. ಘಟನೆಯಲ್ಲಿ 47 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ವರದಿ ಹೇಳಿದೆ.

ಉದ್ರಿಕ್ತರು ಇಟ್ಟಿಗೆ ಮತ್ತು ಬಡಿಗೆಗಳಿಂದ ದಾಳಿ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ದೌಡಾಯಿಸಿದರೂ ಪರಿಸ್ಥಿತಿ ಶಾಂತವಾಗಿಲ್ಲ ಎಂದು ತಿಳಿದು ಬಂದಿದೆ.

ಪಾಕಿಸ್ತಾನದಲ್ಲಿ ಅಹ್ಮದೀಯರು ಅಲ್ಪಸಂಖ್ಯಾತ ಗುಂಪಾಗಿದ್ದು, ಕೆಲವು ಸಾಂಪ್ರದಾಯಿಕ ಮುಸ್ಲಿಮರು ಅವರನ್ನು ಧರ್ಮದ್ರೋಹಿಗಳು ಎಂದು ಪರಿಗಣಿಸುತ್ತಾರೆ. ಪಾಕಿಸ್ತಾನ ಕಾನೂನು ಸಹ ಅಹ್ಮದೀಯರು ತಮ್ಮನ್ನು ತಾವು ಮುಸ್ಲಿಂ ಎಂದು ಕರೆದುಕೊಳ್ಳುವುದನ್ನು ನಿರ್ಬಂಧಿಸುತ್ತದೆ ಹಾಗೂ ಇಸ್ಲಾಮಿಕ್ ಚಿಹ್ನೆಗಳನ್ನು ಬಳಸುವುದನ್ನು ತಡೆಯುತ್ತದೆ. ಈ ಕಾರಣಕ್ಕೆ ಆ ಸಮುದಾಯದ ಮೇಲೆ ಹಿಂಸಾಚಾರ ಹಾಗೂ ಚುನಾವಣೆಯಲ್ಲಿ ಮತ ಚಲಾವಣೆಗೆ ಅಡ್ಡಿಪಡಿಸುವುದನ್ನು ಕೆಲವರು ಮಾಡುತ್ತಾರೆ ಎಂದು ವರದಿಗಳು ಹೇಳುತ್ತವೆ.

ಮಿರ್ಜಾ ಗುಲಾಮ್ ಅಹ್ಮದ್ ಎನ್ನುವರು ಈಗಿನ ಪಂಜಾಬ್ನ ಖಾಡಿಯನ್ ಎಂಬಲ್ಲಿ ಇಸ್ಲಾಂ ಒಳಗೇ ಅಹ್ಮದಿ ಮುಸಲ್ಮಾನ್ ಪಂತವನ್ನು 1889 ರಲ್ಲಿ ಹುಟ್ಟುಹಾಕಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.