ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೇಲ್‌ನಲ್ಲಿ ನೆಲೆಸಿರುವ ಕನ್ನಡಿಗರಿಗಾಗಿ ಸಹಾಯವಾಣಿ ಆರಂಭಿಸಿದ ಕರ್ನಾಟಕ ಸರ್ಕಾರ

Published 8 ಅಕ್ಟೋಬರ್ 2023, 12:57 IST
Last Updated 8 ಅಕ್ಟೋಬರ್ 2023, 12:57 IST
ಅಕ್ಷರ ಗಾತ್ರ

ಬೆಂಗಳೂರು: ಹಮಾಸ್‌ ಉಗ್ರರ ದಾಳಿಯಿಂದ ಇಸ್ರೇಲ್‌ನಲ್ಲಿ ಯುದ್ಧ ನಡೆಯುತ್ತಿದೆ. ಈಗಾಗಲೇ 400ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಇಸ್ರೇಲ್‌ನಲ್ಲಿ ಹಲವು ಭಾರತೀಯರು ಅದರಲ್ಲೂ ಕರ್ನಾಟಕದವರು ವಾಸಿಸುತ್ತಿದ್ದಾರೆ. ಅವರ ರಕ್ಷಣೆಗಾಗಿ ಕರ್ನಾಟಕ ಸರ್ಕಾರ ಸಹಾಯವಾಣಿ ಆರಂಭಿಸಿದೆ.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಯ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಳ್ಳಲಾಗಿದೆ.

‘ಇಸ್ರೇಲ್‌ನಲ್ಲಿನ ಪುಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಇಸ್ರೇಲ್‌ನಲ್ಲಿರುವ ಎಲ್ಲಾ ಭಾರತೀಯ ಪುಜೆಗಳು ಜಾಗರೂಕರಾಗಿರಲು ಮತ್ತು ಸ್ಥಳೀಯು ಅಧಿಕಾರಿಗಳ ಸೂಚನೆ ಮತ್ತು ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸುವಂತೆ ವಿನಂತಿಸಲಾಗಿದೆ. ದಯವಿಟ್ಟು ಹೆಚ್ಚಿನ ಜಾಗರೂಕತೆಯನ್ನು ವಹಿಸುತ್ತಾ, ಅನಗತ್ಯ ಪುಯಾಣಗಳನ್ನು ತಪ್ಪಿಸಿ ಮತ್ತು ಸುರಕ್ಷತಾ ಆಶ್ರಯಗಳ (Bomb Shelter) ಹತ್ತಿರ ಇರಬೇಕಾಗಿ ವಿನಂತಿ, ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಸ್ರೇಲಿ ಹೋಮ್ ಪುಂಟ್ ಕಮಾಂಡ್ ವೆಬ್‌ಸೈಟ್ (https://www.oref.org.il/en) ಅಥವಾ ಅವರ ಸಿದ್ಧತೆ ಕರಪತ್ರವನ್ನು ನೋಡಿ.

ತುರ್ತು ಸಂದರ್ಭದಲ್ಲಿ, ದಯವಿಟ್ಟು ನಮ್ಮನ್ನು +97235226748 ನಲ್ಲಿ ಸಂಪರ್ಕಿಸಿ ಅಥವಾ consl.telaviv@mea.gov.in ನಲ್ಲಿ ಇ–ಮೇಲ್ ಸಂದೇಶವನ್ನು ಕಳುಹಿಸಿ,

ಯಾವುದೇ ಹೆಚ್ಚಿನ ಮಾರ್ಗದರ್ಶನಕ್ಕಾಗಿ ರಾಯಭಾರ ಕಚೇರಿಯ ಸಿಬ್ಬಂದಿಯನ್ನು ಸಂಪರ್ಕಿಸಿ’ ಎಂದು ಪ್ರಕಟಣೆ ಹೊರಡಿಸಲಾಗಿದೆ. 

‘ಕರ್ನಾಟಕದಿಂದ ಇಸ್ರೇಲ್‌ ಹೋಗಿರುವ ಕನ್ನಡಿಗರಿಗೆ ನೆರವಿನ ಅಗತ್ಯ ಇದ್ದರೆ, ಕರ್ನಾಟಕ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಸಹಾಯವಾಣಿ ಸಂಖ್ಯೆಗಳನ್ನು 080–22340676, 080–22253707 ಸಂಪರ್ಕಿಸಬಹುದು’ ಎಂದಿದ್ದಾರೆ.

ಇಸ್ರೇಲ್‌ ಹಾಗೂ ಪ್ಯಾಲೆಸ್ಟೀನ್‌ ನಡುವಿನ ಸಂಘರ್ಷ ಯುದ್ಧದ ಸ್ವರೂಪವನ್ನು ಪಡೆದಿದ್ದು, ಎರಡೂ ಕಡೆಗಳಿಂದ ನಡೆದ ದಾಳಿ, ಪ್ರತಿದಾಳಿಯಲ್ಲಿ 400ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ.

ಪ್ಯಾಲೆಸ್ಟೀನ್‌ನ ಹಮಾಸ್‌ ಬಂಡುಕೋರರು ಶನಿವಾರ ನಸುಕಿನಲ್ಲಿ ಗಾಜಾ ಪಟ್ಟಿಯಿಂದ ಇಸ್ರೇಲ್‌ ಮೇಲೆ ನಡೆಸಿದ ದಿಢೀರ್‌ ರಾಕೆಟ್‌ ದಾಳಿಗೆ ಕನಿಷ್ಠ 200 ಮಂದಿ ಸಾವಿಗೀಡಾದರೆ, ಇಸ್ರೇಲ್‌ ನಡೆಸಿದ ಪ್ರತಿ ದಾಳಿಯಲ್ಲಿ ಗಾಜಾ ಪಟ್ಟಿಯಲ್ಲಿನ ಕನಿಷ್ಠ 200ಕ್ಕೂ ಜನರ ಹತ್ಯೆಯಾಗಿದೆ. ಎರಡೂ ಕಡೆಗಳಲ್ಲಿ ಸಾವಿರಾರು ಮಂದಿ ಗಾಯಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT