ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಜಖಸ್ತಾನದಲ್ಲಿ ಪ್ರತಿಭಟನೆ: ಉಗ್ರರನ್ನು ಗುಂಡಿಕ್ಕಿ ಕೊಲ್ಲಲು ಪೊಲೀಸರಿಗೆ ಸೂಚನೆ

Published : 7 ಜನವರಿ 2022, 11:03 IST
ಫಾಲೋ ಮಾಡಿ
Comments

ಮಾಸ್ಕೊ: ಭಯೋತ್ಪಾದಕರನ್ನು ಗುಂಡಿಟ್ಟು ಕೊಲ್ಲುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಕಜಖಸ್ತಾನದ ಅಧ್ಯಕ್ಷ ಕಾಸ್ಯಾಂ ಜೊಮಾರ್ಟ್‌ ಟೊಕಯೆವ್‌ ಹೇಳಿದ್ದಾರೆ.

ಕಳೆದ ಕೆಲವು ದಿನಗಳಿಂದ ಇಲ್ಲಿ ನಡೆಯುತ್ತಿರುವ ಹಿಂಸಾಚಾರ, ಪ್ರತಿಭಟನೆಯನ್ನು ಹತ್ತಿಕ್ಕುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಟೆಲಿವಿಷನ್‌ ಮೂಲಕ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ.

ಇಲ್ಲಿ ಉಂಟಾಗಿರುವ ಪ್ರಕ್ಷುಬ್ದ ಪರಿಸ್ಥಿತಿಗೆ ‘ಉಗ್ರರು’, ‘ಭಯೋತ್ಪಾದಕರು’ ಕಾರಣರಾಗಿದ್ದಾರೆ. ಶರಣಾಗತಿ ಆಗದಿದ್ದರೆ ಅವರನ್ನು ನಿರ್ಮೂಲನೆ ಮಾಡಲು ಸೂಚಿಸಲಾಗಿದೆ ಎಂದಿದ್ದಾರೆ.

ಪ್ರತಿಭಟನಕಾರರೊಂದಿಗೆ ಮಾತುಕತೆ ನಡೆಸುವಂತೆ ಕೆಲವು ರಾಷ್ಟ್ರಗಳ ನಾಯಕರು ನೀಡಿರುವ ಸಲಹೆಯನ್ನು ತಿರಸ್ಕರಿಸಿರುವ ಅವರು ಅಪರಾಧಿಗಳು ಮತ್ತು ಕೊಲೆಗಾರರ ಜತೆ ಏನು ಸಂಧಾನ ನಡೆಸುವುದು ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT