ನವದೆಹಲಿ: ಲಷ್ಕರ್–ಎ–ತಯಬಾದ ಭಯೋತ್ಪಾದಕ ರಝಾವುಲ್ಲಾ ನಿಜಾಮಣಿ ಅಲಿಯಾಸ್ ಅಬು ಸೈಫುಲ್ಲಾನನ್ನು ಅಪರಿಚಿತ ಬಂಧೂಕುಧಾರಿಗಳು ಭಾನುವಾರ ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎಂದು ಪಾಕಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನ ಸರ್ಕಾರದ ಭದ್ರತೆಯಲ್ಲಿರುವ ರಝಾವುಲ್ಲಾ ಭಾನುವಾರ ಮಧ್ಯಾಹ್ನ ಸಿಂಧ್ ಪ್ರಾಂತ್ಯದ ಮಟ್ಲಿಯಲ್ಲಿರುವ ತನ್ನ ಮನೆಯಿಂದ ಹೊರಟಿದ್ದಾಗ ಹತ್ಯೆಗೀಡಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಗ್ಪುರದಲ್ಲಿರುವ ಆರ್ಎಸ್ಎಸ್ ಕೇಂದ್ರ ಕಚೇರಿ ಮೇಲೆ 2006ರಲ್ಲಿ ನಡೆದ ದಾಳಿಯಲ್ಲಿ ರಝಾವುಲ್ಲಾ ನಿಜಾಮಣಿ ಪ್ರಮುಖ ಪಾತ್ರಧಾರಿಯಾಗಿದ್ದ. ಅಲ್ಲದೆ, 2005ರಲ್ಲಿ ಬೆಂಗಳೂರಿನಲ್ಲಿರುವ ಐಐಎಸ್ಸಿ ಮೇಲಿನ ದಾಳಿ ಮತ್ತು 2008ರಲ್ಲಿ ರಾಂಪುರದಲ್ಲಿನ ಸಿಆರ್ಪಿಎಫ್ ಶಿಬಿರದ ಮೇಲಿನ ಭಯೋತ್ಪಾದಕ ದಾಳಿಯಲ್ಲೂ ರಝಾವುಲ್ಲಾ ಭಾಗಿಯಾಗಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.