ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌– 4 ವೀಸಾ ವಿಚಾರಣೆಗೆ ಅನುಮತಿ

Last Updated 19 ಡಿಸೆಂಬರ್ 2018, 19:32 IST
ಅಕ್ಷರ ಗಾತ್ರ

ವಾಷಿಂಗ್ಟನ್: ಎಚ್‌– 4 ವೀಸಾ ಸಂಬಂಧ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಅಮೆರಿಕದ ನ್ಯಾಯಾಲಯ ಅನುಮತಿ ನೀಡಿದೆ.

2015ರಲ್ಲಿ ಎಚ್‌–1 ಬಿ ವೀಸಾ ಹೊಂದಿರುವವರ ಸಂಗಾತಿಗಳಿಗೆ ಎಚ್‌– 4 ವೀಸಾದಲ್ಲಿ ನೌಕರಿ ಮಾಡುವ ಅವಕಾಶ ನೀಡಲಾಗಿತ್ತು.

ಈ ಸೌಲಭ್ಯವನ್ನು ರದ್ದುಗೊಳಿಸುವ ನಿಟ್ಟಿನಲ್ಲಿ ಟ್ರಂಪ್‌ ಆಡಳಿತ ಚಿಂತನೆ ನಡೆಸಿದೆ. ಎಚ್‌–4 ವೀಸಾ ರದ್ದುಗೊಂಡರೆ ಸಾವಿರಾರು ಭಾರತೀಯರ ಮೇಲೆ ಪರಿಣಾಮ ಬೀರಲಿದೆ.ಜಿಲ್ಲಾ ನ್ಯಾಯಾಲಯ ಒಬಾಮ ಆಡಳಿತದ ನಿರ್ಣಯವನ್ನು ಎತ್ತಿ ಹಿಡಿದಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ‘ಸೇವ್ ಜಾಬ್‌ ಯುಎಸ್‌ಎ’ ಎಂಬ ಸಂಘಟನೆ ಅಮೆರಿಕನ್ನರ ಉದ್ಯೋಗಕ್ಕೆ ಅಡ್ಡಿಯಾಗಿರುವ ನಿಯಮವನ್ನು ತೆಗೆದುಹಾಕುವಂತೆ ಆಗ್ರಹಿಸಿ ಮೇಲ್ಮನವಿ ಸಲ್ಲಿಸಿತ್ತು.

ಸಿಬ್ಬಂದಿಗೆ ಬಂದೂಕು ನೀಡಲು ಸಲಹೆ
ವಾಷಿಂಗ್ಟನ್ (ಎಎಫ್‌ಪಿ): ಅಮೆರಿಕದ ಶಾಲೆಗಳಲ್ಲಿ ಗುಂಡಿನ ದಾಳಿ ತಡೆಗಟ್ಟಲು ಪರಿಣತ ಸಿಬ್ಬಂದಿಯನ್ನು ರಕ್ಷಣೆಗೆ ನೇಮಿಸಿಕೊಳ್ಳುವಂತೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೇಮಿಸಿದ್ದ ಸುರಕ್ಷತಾ ಸಮಿತಿ ಶಿಫಾರಸು ಮಾಡಿದೆ.

ಫ್ಲಾರಿಡಾ ಶಾಲೆಯಲ್ಲಿ ಮಾಜಿ ವಿದ್ಯಾರ್ಥಿಯೊಬ್ಬ ಗುಂಡಿನ ದಾಳಿ ನಡೆಸಿ 17 ವಿದ್ಯಾರ್ಥಿಗಳನ್ನು ಹತ್ಯೆ ಮಾಡಿದ ನಂತರ ಟ್ರಂಪ್‌ ಸೂಚನೆಯಂತೆ ಸಮಿತಿ ರಚಿಸಲಾಗಿತ್ತು.

ಸಮಿತಿ ಈಗ 1800 ಪುಟಗಳ ಸಮಗ್ರ ವರದಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT