ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಯನ್‌ ಏರ್‌: ಅವಶೇಷಗಳ ಪತ್ತೆಗೆ ಕ್ರಮ

Last Updated 17 ಡಿಸೆಂಬರ್ 2018, 15:04 IST
ಅಕ್ಷರ ಗಾತ್ರ

ಜಕಾರ್ತ: ಕಳೆದ ತಿಂಗಳು ಸಮುದ್ರದಲ್ಲಿ ಪತನಗೊಂಡಿದ್ದ ವಿಮಾನದ ಅವಶೇಷಗಳ ಪತ್ತೆಗಾಗಿಲಯನ್‌ ಏರ್‌ ಕಂಪನಿ₹ 18.62 ಕೋಟಿ ಅನುದಾನ ಬಿಡುಗಡೆ ಮಾಡಿದೆ.

ಅಕ್ಟೋಬರ್‌ 29ರಂದುಬೋಯಿಂಗ್ 737 ವಿಮಾನ ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಇಂಡೊನೇಷ್ಯಾದ ರಾಜಧಾನಿ ಜಕಾರ್ತನಲ್ಲಿ ಪತನಗೊಂಡಿತ್ತು.ದುರಂತದ ವೇಳೆ 189 ಪ್ರಯಾಣಿಕರು ವಿಮಾನದಲ್ಲಿದ್ದರು. ಆದರೆ ಹಲವರ ಅವಶೇಷಗಳು ಇದುವರೆಗೂ ಪತ್ತೆಯಾಗಿಲ್ಲ.

ಮೃತ ಪ್ರಯಾಣಿಕರ ಅವಶೇಷಗಳ ಪತ್ತೆಗೆ ಒತ್ತಡ ಹೆಚ್ಚಿರುವ ಕಾರಣ ವಿಮಾನ ಕಂಪನಿ, ಡಚ್‌ ಕಂಪನಿಯ ಸಹಕಾರವನ್ನು ಪಡೆದುಕೊಂಡಿದೆ.

ಡಚ್‌ ಮೂಲದ ಎಂಪಿವಿ ಎವರೆಸ್ಟ್‌ ಹಡಗಿನ ಮೂಲಕ ಎರಡನೇ ‘ಬ್ಲ್ಯಾಕ್‌ ಬಾಕ್ಸ್‌‘ ಮತ್ತು ಮೃತದೇಹಗಳ ಪತ್ತೆಗಾಗಿ ಶೋಧ ಕಾರ್ಯ ನಡೆಸಲಾಗುವುದು.

142 ಮೀಟರ್‌ ಉದ್ದದ ಈ ಹಡಗು ಬುಧವಾರ ವಿಮಾನ ಪತಗೊಂಡ ಸ್ಥಳಕ್ಕೆ ಬರಲಿದೆ.

ಮೃತರ ಕುಟುಂಬಸ್ಥರು ಮೃತದೇಹದ ಅವಶೇಷಗಳನ್ನು ಪತ್ತೆ ಮಾಡುವುದರ ಜೊತೆಗೆ ಪರಿಹಾರವನ್ನು ನೀಡುವಂತೆ ಒತ್ತಾಯಿಸಿದ್ದಾರೆ. ಮೃತ ಪ್ರಯಾಣಿಕರ ಸಂಬಂಧಿಕರುವಿಮಾನ ಸಂಸ್ಥೆ ವಿರುದ್ಧ ಮೊಕದ್ದಮೆ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT