ಡಬ್ಲ್ಯುಇಎಫ್ ಸಭೆಯ ವಿಧ್ಯುಕ್ತ ಆರಂಭಕ್ಕೂ ಮುನ್ನಾದಿನದಂದು ದಾವೋಸ್‌ನಲ್ಲಿ ಮೊದಲ ಬಾರಿಗೆ 90 ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆ ನಡೆಯಿತು. ಈ ಸಭೆಯಲ್ಲಿ ಉಕ್ರೇನ್‌ಗಾಗಿ ಶಾಂತಿ ಯೋಜನೆ ಕುರಿತು ಚರ್ಚಿಸುವುದು ಸೇರಿದಂತೆ ಇಸ್ರೇಲ್ – ಗಾಜಾ ಸಂಘರ್ಷ, ಎಐ– ರಚಿತ ಡೀಪ್ ಫೇಕ್ ಚಿತ್ರಗಳು ತಂದೊಡ್ಡಿರುವ ಬೆದರಿಕೆ, ಹವಾಮಾನ ಬದಲಾವಣೆ, ಆರ್ಥಿಕ ಮಂದಗತಿ ಹಾಗೂ ಜಗತ್ತಿನ ಮುಂದಿರುವ ಇನ್ನೂ ಅನೇಕ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.